ಬಂಟ್ವಾಳ; ಬಿ.ಸಿ.ರೋಡಿನಲ್ಲಿರುವ ತಾಲೂಕು ಕಛೇರಿ ಸ್ಥಳದಲ್ಲಿ 10ಕೋಟಿ ರೂ ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಹಿನ್ನೆಲೆಯಲ್ಲಿ , ಸದ್ರಿ ಸ್ಥಳದಲ್ಲಿ ಕಾರ್ಯಚರಿಸುತ್ತಿರುವ ತಾಲೂಕು ಕಛೇರಿ , ಸಬ್ರಿಜಿಸ್ಟ್ರಾರ್ ಕಛೇರಿ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಹಳೇ ತಾಲೂಕು ಕಚೇರಿಯಲ್ಲಿರುವ ದಾಖಲೆಗಳನ್ನು ಸರಿಯಾದ ಸಮಯಕ್ಕೆ ತಾತ್ಕಲಿಕ ಕಟ್ಟಡಕ್ಕೆ ವರ್ಗಯಿಸಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
DSC_5288

DSC_5283

DSC_5284
ಈಗಾಗಲೇ ಸ್ಥಳಾಂತರಗೊಂಡ ಕಟ್ಟಡಕ್ಕೆ ಮುಖ್ಯವಾದ ಕೆಲವೊಂದು ಪೈಲ್ಗಳನ್ನು ಮಾತ್ರ ತಂದು ಇಡಲಾಗಿದೆ ಉಳಿದ ದಾಕಲೆಗಳನ್ನು ಅಲ್ಲೇ ಇಡಲಾಗಿದೆ ಅದಕ್ಕೆ ಸರಿಯಾದ ಭದ್ರತೆ ಇಲ್ಲದಿರುವುದರಿಂದ ಹಲವಾರು ಜನರಿಗೆ ಅನ್ಯಾಯವಾಗುವ ಬಗ್ಗೆ ಜನ ಸಂಶಯ ವ್ಯಕ್ತಪಡಿಸಿದ್ದಾರೆ. ಬಾಗಿಲುಗಳನ್ನು ತರೆದು ಇಡಲಾಗಿದ್ದು ಅದರಲ್ಲಿ ಕೂಲಿ ಕಾರ್ಮಿಕರು ವಿದ್ಯುತ್ ಮತ್ತು ಇತರ ಕೆಲಸಗಳನ್ನು ಮಾಡುತ್ತಿದಾರೆ. ಅಸಮಯದಲ್ಲಿ ದಾಖಲೆಗಳನ್ನು ಕಾಪಾಡಲು ಕಚೇರಿ ಯಾವ ಸಿಬಂದಿಗಳು ಇಲ್ಲ ಎನ್ನುತ್ತಿದ್ದಾರೆ. ಇಲ್ಲಿನ ತಾಲೂಕು ಕಚೇರಿ ಎಂದರೆ ಅದು ಅವ್ಯವಹಾರಕ್ಕೆ ಇನ್ನೊಂದು ಹೆಸರು. ಇಲ್ಲಿನ ಅಧಿಕಾರಿಗಳು ಬೋರಕರ್ಗಳ ಜೊತೆ ಶಾಮೀಲಾಗಿ ಸಾಕಷ್ಟು ಅಕ್ರಮ ಕೆಲಸಗಳನ್ನು ಮಾಡಿದ ದಾಖಲೆಗಳು ಕಣ್ಣ ಮುಂದೆ ಇವೆ. ಈಗ ಮಿನಿ ವಿಧಾನ ಸೌಧ ದ ಹೆಸರಿನಲ್ಲಿ ಮತ್ತಷ್ಟು ಅಕ್ರಮ ಕೆಲಸಗಳನ್ನು ಇವರು ಮಾಡಿಕೊಳ್ಳಲು ಅವಕಾಶ ನೀಡಿದಂತಾಗಿದೆ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಇಲ್ಲಿನ ನೌಕರರು ಕಚೇರಿಯ ನಕಲಿ ಮದ್ರೆಗಳನ್ನು ತಯಾರಿಸಿ ನಕಲಿ ದಾಖಲೆಗಳನ್ನು ಮಾಡಿದ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿತ್ತು. ಆದರೂ ಅವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ತಾಲೂಕಿನ ಅದದೆಷ್ಟೂ ಜನರ ಜಮೀನು ಯಾರದೋ ಹೆಸರಿಗೆ ರೆಕಾರ್ಡ ಆದದ್ದು ಇದೆ. ಅಂತಹ ಪ್ರಕರನಗಳು ಕೊರ್ಟನಲ್ಲಿವೆ. ಅದಕ್ಕೆ ಇಲ್ಲಿನ ದಂಡಾಧಿಕಾರಿಯಿಂದ ಹಿಡಿದು ಎಲ್ಲಾ ನೌಕಕರು ಶಾಮೀಲಾಗುತ್ತಾರೆ. ಇಲ್ಲಿಗೆ ಬರುವ ಅಧಿಕಾರಿಗಳು ಕೂಡಾ ಎಲ್ಲಾ ತಿಮಿಂಗಲಗಲು ಎಂದು ಜನರು ಆರೋಪ ವ್ಯಕ್ತಪಡಿಸುತ್ತಾರೆ. ಜನಪ್ರತಿನಿಧಿಗಳ ಮತ್ತು ಶ್ರಿಮಂತರ ಕೈಗೊಂಬೆಯಾಗಿ ಕೆಲಸ ಮಾಡುವ ಇಲ್ಲಿನ ಕಂದಾಯ ಇಲಾಖೆಯ ಅಧಿಖಾರಿಗಳು ಜನ ಸಾಮನ್ಯರ ಕೆಲಸ ಕಾರ್ಯಗಳನ್ನು ಮಾಡಲು ಹಣಕ್ಕಾಗಿ ಕೈಯೊಡ್ಡುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕೆಲವೊಂದು ಕೋರ್ಟ ಕಚೇರಿಯಲ್ಲಿ ಪ್ರಕರಣ ದಾಖಾಲಾದ ಅತೀ ಮುಖ್ಯವಾದ ದಾಖಲೆಗಳು ಕಂದಾಯ ಇಲಾಖೆಯಲ್ಲಿ ಇರುವುದರಿಮದ ಅದರ ರಕ್ಷಣೆ ಮಾಡಬೇಕಾಗಿದೆ. ಇಲ್ಲಿನ ಕಿಟಕಿ ಮುರಿಯಲಾಗಿದೆ, ಬಾಗಿಲು ತೆರೆಯಲಾಗಿದೆ ಪೈಲುಗಳು ಕಳ್ಳರ ಪಾಲಾಗದೆ ಫಲಾನುಭವಿಗಳ ಕೈ ಸೇರಿದರೆ ಸಾಕು ಎನ್ನು ಮಾತನ್ನು ಹೇಳಲಾಗುತ್ತಿದೆ.

By suddi9

Leave a Reply

Your email address will not be published. Required fields are marked *