ಬಂಟ್ವಾಳ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ಮಳೆ ಹನಿ ಯೋಜನೆಯಡಿಯಲ್ಲಿ ರೂ.20ಲಕ್ಷ ವೆಚ್ಚದ ತುಂಬೆ-ನೇತ್ರಾವತಿ ಕಾಂಕ್ರಿಟೀಕೃತ ರಸ್ತೆಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.

ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ , ರಾಜ್ಯ ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಅಮೀರ್ ಅಹ್ಮದ್ ತುಂಬೆ , ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೆರಾ , ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ , ಭೂ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ , ಇಂಜಿನಿಯರ್ ಕೃಷ್ಣ , ನಿಸಾರ್ ಅಹ್ಮದ್, ಗೋಪಾಲ್‍ಕೃಷ್ಣ ತುಂಬೆ, ಗಣೇಶ್ ಸಾಲಿಯಾನ್, ಪ್ರಭಾಕರ್, ಪ್ರವೀಣ್ ಕೊಟ್ಟಿಂಜ, ರ ಶೀದ್ ಬಿ., ಕೆ.ಇ.ಖಾದರ್, ಕೇಶವ ದೋಟ, ಸುಂದರ ದೋಟ, ಪ್ರಭಾಕರ ರಾಮಲ್ಕಟ್ಟೆ , ಇಮ್ತಿಯಾಝ್ ದೇವದಾಸ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.
