ಬಂಟ್ವಾಳ: ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಬಂಡಸಾಲೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಕೃಷ್ಣ ಕೃಪಾ’ ವಾಣಿಜ್ಯ ಸಂಕೀರ್ಣದಲ್ಲಿ ಕೆನರಾ ಬ್ಯಾಂಕಿನ ಶಾಖೆಯು ಇದೇ 23ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.
22btl-bank
ಗ್ರಾಮೀಣ ಪ್ರದೇಶವಾಗಿರುವ ಸೋರ್ಣಾಡು ಪ್ರದೇಶದಲ್ಲಿ ಸಂಪೂರ್ಣ ಹವಾನಿಯಂತ್ರಿತ ಶಾಖೆಯಲ್ಲಿ ಗ್ರಾಹಕರಿಗೆ ಆಧುನಿಕ ಮತ್ತು ಸುವ್ಯವಸ್ಥಿತ ವ್ಯವಸ್ಥೆ ಕಲ್ಪಿಸಲಾಗಿದೆ.
ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಹರಿದೀಶ್ ಕುಮಾರ್ ಬಿ. ನೂತನ ಶಾಖೆ ಉದ್ಘಾಟಿಸಲಿದ್ದು, ಮಂಗಳೂರು ವೃತ್ತ ಉಪ ಮಹಾ ಪ್ರಬಂಧಕಿ ಸುಜಾತ ಕರುಣಾಕರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಹಾಯಕ ಮಹಾ ಪ್ರಬಂಧಕ ಕೆ.ಎಸ್.ಆಚಾರ್ಯ ಮತ್ತಿತರ ಗಣ್ಯರು ಭಾಗವಹಿಸುವರು.
ಇದೇ ವೇಳೆ ‘ಜನ್‍ಧನ್’ ಯೋಜನೆಯಡಿ ಅರ್ಹ ಗ್ರಾಹಕರಿಗೆ ‘ರೂಪೆ ಕಾರ್ಡ್’ ವಿತರಣೆ ಮತ್ತು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಖಾಧಿಕಾರಿ ರಮೇಶ ನಾಯ್ಕ್ ಸೋರ್ನಾಡು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *