ಮೂಡುಬಿದರೆ: ಪುತ್ತಿಗೆಯ ಹಾಸ್ಟೆಲ್ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನ ತಲೆಗೆ 5 ಅಂತಸ್ತಿನಿಂದ ಮರದ ತುಂಡೊಂದು ಬಿದ್ದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೃತ ಕಾರ್ಮಿಕನನ್ನು ಗುಲ್ಬರ್ಗದ ಕುಕ್ಕನ್ನೂರು ನಿವಾಸಿ ನಿಂಗಣ್ಣ(38) ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮೂಲ್ಕಿ ಲಿಂಗಪ್ಪಯ್ಯ ಕಾಡು ಎಂಬಲ್ಲಿ ವಾಸವಾಗಿದ್ದ. ಮಂಗಳವಾರ ಕಟ್ಟಡದ ನೆಲ ಅಂತಸ್ತಿ ಈತ ಕೆಲಸ ಮಾಡುತ್ತಿದ್ದರೆ, ಅದೇ ಕಟ್ಟಡದ 5ನೇ ಅಂತಸ್ತಿನಲ್ಲಿ ಇನ್ನು ಕೆಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. 5ನೇ ಅಂತಸ್ತಿನಲ್ಲಿ ಆಕಸ್ಮಾತ್ ಮರದ ತುಂಡೊಂದು ಕೆಳಗೆ ಕೆಲಸ ಮಾಡುತ್ತಿದ್ದ ನಿಂಗಣ್ಣನ ತಲೆಗೆ ಬಿದ್ದು ಆತ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *