ಬಂಟ್ವಾಳ: ನರಿಕೊಂಬು ವೀರ ಮಾರುತಿ ವ್ಯಾಯಾಮ ಶಾಲೆ ಇದರ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಸತೀಶ್ ಬಿ ಮತ್ತು ಉಪಾಧ್ಯಕ್ಷರಾಗಿ ಮಹೇಶ್ ಕೆ ಆಯ್ಕೆಯಾಗಿದ್ದಾರೆ.
sathish
ವಾರ್ಷಿಕ ಮಹಾಸಭೆಯ ಶಶಿಧರ್ ಎನ್.ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ 2014-15 ನೇ ಸಾಲಿನ ಲೆಕ್ಕಪತ್ರವನ್ನು ಹಾಗೂ ಚಟುವಟಿಕೆ ವರದಿಯನ್ನು ಕಾರ್ಯದರ್ಶಿಯಾದ ಶಮೀತ್ ಕೆ ಮಂಡಿಸಿದರು.
ಕಾರ್ಯದರ್ಶಿಯಾಗಿ ಶಮಿತ್ ಕೆ, ಜೊತೆ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್, ಕೋಶಾಧಿಕಾರಿಯಾಗಿ ಶ್ರೀರಾಮ್ ಸುಜೀರ್, ಕ್ರೀಡಾಕಾರ್ಯದರ್ಶಿಯಾಗಿ ಸಂತೋಷ್, ಜೊತೆಕ್ರೀಡಾಕಾರ್ಯದರ್ಶಿಯಾಗಿ ಪ್ರದೀಪ್ ಕೆ, ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಕಾರಿಂಜೆ, ಭಜನಾ ಕಾರ್ಯದರ್ಶಿಯಾಗಿ ಶೈಲೇಶ್, ಅನಿತ್, ತಿಲಕ್‍ರವರು ಸರ್ವಾನುಮತದಿಂದ ಆಯ್ಕೆಗೊಂಡರು. ಅಲ್ಲದೆ 11 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

By suddi9

Leave a Reply

Your email address will not be published. Required fields are marked *