ಪೂಂಜಾಲ್ ಕಟ್ಟೆ : ಮಣಿನಾಲ್ಕೂರು ಗ್ರಾಮದ ಅಟ್ಟದಡ್ಕದಲ್ಲಿ ರೂ20ಲಕ್ಷ ವೆಚ್ಚದ ಪ್ರವಾಹ ನಿಯಂತ್ರಣ ತಡೆಗೋಡೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.
ತಾ.ಪಂ.ಸದಸ್ಯರಾದ ಪದ್ಮಶೇಖರ ಜೈನ್ , ಸಂಪತ್ ಕುಮಾರ್ ಶೆಟ್ಟಿ ,ಎಫ್ರೆಂ ಸಿಕ್ವೇರಾ , ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ , ಸಣ್ಣ ನೀರಾವರೀ ಇಲಾಖೆಯ ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಡಿ.ಎಂ., ಭೂ ಬ್ಯಾಂಕ್ ನಿರ್ದೇಶಕ ಶಿವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು .

