ಸಾಮೂಹಿಕ ಅಭಿವೃದ್ಧಿಗಾಗಿ ಸ್ತ್ರೀ ಶಕ್ತಿ ಸಂಘಗಳಿಗೆ ಕೌಶಲ್ಯ ತರಬೇತಿ
ಮೂಡಬಿದರೆ: ಮಹಿಳೆಯರ ಸಾಮೂಹಿಕ ಸರ್ವಾಂಗೀಣ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ತ್ರೀ ಶಕ್ತಿ ಸಂಘಗಳ ಮೂಲಕ ಕೌಶಲ್ಯ ತರಬೇತಿ ನೀಡುವುದು ಅತ್ಯಂತ ಸೂಕ್ತವಾದುದು. ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಪರಿಣಾಮಕಾರಿಯಾಗುವುದು ಎಂದು ಶಾಸಕ ಮೊೈದಿನ್ ಬಾವಾ ಹೇಳಿದರು.


ಅವರು ದ.ಕ. ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಮಂಗಳೂರು ಗ್ರಾಮಾಂತರ ವತಿಯಿಂದ ಎಡಪದವು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ತಾಲೂಕು ಸ್ತ್ರೀ ಶಕ್ತಿ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಅವರು ಮಾತನಾಡಿ -ಸ್ತ್ರೀಯರು ಆತ್ಮಸ್ಥೈರ್ಯದಿಂದ ಒಗ್ಗೂಡಿ ಶ್ರಮಿಸಿದಾಗ ಸಾಮೂಹಿಕ ಅಭಿವೃದ್ಧಿ ಹಾಗೂ ಪಿಡುಗುಗಳನ್ನು ಎದುರಿಸುವ ಜಾಗೃತಿಯೂ ಮೂಡಿಸುವುದೂ ಸುಲಭ ಸಾಧ್ಯ ಎಂದರು.
ಎಡಪದವು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಸದಸ್ಯ ಜನಾರ್ಧನ ಗೌಡ, ತಾ.ಪಂ. ಸದಸ್ಯೆ ಸುಜಾತ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರೋಹಿದಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಕಾರಿ ಸುಂದರ ಪೂಜಾರಿ, ಕೊಂಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ| ಚಿರಾಗ್, ಶಿಶು ಅಭಿವೃದ್ಧಿ ಯೋಜನಾಕಾರಿ ಗುಲಾನಿ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಫಿಲೋಮಿನಾ ಜಾರ್ಜ್, ಮಾಜಿ ಜಿ.ಪಂ. ಸದಸ್ಯ ಕೃಷ್ಣ ಅಮೀನ್ ಉಪಸ್ಥಿತರಿದ್ದರು.
ಶಿಶುಭಿವೃದ್ಧಿ ಯೋಜನಾಕಾರಿ ಶ್ಯಾಮಲಾ ಪಿ.ಕೆ. ಸ್ವಾಗತಿಸಿದರು. ಮೇಲ್ವಿಚಾರಕಿ ಭಾರತಿ ವಂದಿಸಿದರು. ಸಹಾಯಕ ಶಿಶು ಯೋಜನಾಕಾರಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.
