ಪೂಂಜಾಲ್ಕಟ್ಟೆ : ಅರಳ ಗ್ರಾಮದ ಮೂಲರಪಟ್ನದಲ್ಲಿ ರೂ.20ಲಕ್ಷ ವೆಚ್ಚದಲ್ಲಿ ಫಲ್ಗುಣಿ ನದಿ ಪ್ರವಾಹ ನಿಯಂತ್ರಣ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.

ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸದಸ್ಯ ಎಫ್ರೆಂಸಿಕ್ವೇರಾ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಡಿ.ಎಂ. , ಅರಳ ಗ್ರಾ.ಪಂ.ಸದಸ್ಯ ಅಶ್ರಫ್ ಎಂ.ಬಿ, ಮಹಮ್ಮದ್ ಹನೀಫ್, ಎಂ.ಎ.ಅಝೀಝ್ , ಅಬ್ದುಲ್ ಹಮೀದ್, ಹಕೀಂ, ಎಂ.ಎ.ಹಾಜಬ್ಬ ಮತ್ತಿತರರು ಉಪಸ್ಥಿತರಿದ್ದರು.
