ಬಂಟ್ವಾಳ : ಮಲಾಕಾ ಅಪ್ಲೈಯನ್ಸ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಯ ಬಿಗ್ಗೆಸ್ಟ್ ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ’ ಏರ್ ಕಂಡೀಶನ್ಡ್ ಸಿದ್ಧ ಉಡುಪುಗಳ ಮಳಿಗೆಯು ಎ.19 ರ ಭಾನುವಾರದಂದು ಬಿ.ಸಿ.ರೋಡಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಲಾಕಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ತಿಳಿಸಿದರು.
ಬಿ.ಸಿ ರೋಡ್ ಕೃಷ್ಟಿಮಾದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಾಕ ಸಂಸ್ಥೆ ಗ್ರಾಹಕರ ಅಪೇಕ್ಷೆಯ ಮೇರೆಗೆ ತನ್ನ ಕಾರ್ಯಶೈಲಿಯನ್ನು ವಿಸ್ತರಿಸಿಕೊಂಡು ಬಂದಿದೆ. ಬಿ.ಸಿ.ರೋಡಿನಲ್ಲಿ ಕಳೆದ ಹಲವುವರ್ಷಗಳಿಂದ ವಿದ್ಯುತ್ ಉಪಕರಣಗಳ ಬೃಹತ್ ಮಳಿಗೆಯನ್ನು ನಡೆಸಿಕೊಂಡು ಬಂದಿದ್ದು, ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
DSC_6319
ನೂತನ ಸಿದ್ಧ ಉಡುಪುಗಳ ಮಳಿಗೆ `ಯಸೋಮ’ ವೆಡ್ಡಿಂಗ್ ಸಾರೀ ಎಂಪೋರಿಯಂ’ ಯಲ್ಲಿ ಕಾಂಜೀವರಂ ಸಿಲ್ಕ್, ಧರ್ಮವರಂ ಸಿಲ್ಕ್, ಬನಾರಸಿ ಸಿಲ್ಕ್ (ಸಾಡೊ), ಮೈಸೂರು ಸಿಲ್ಕ್,ಪ್ಯೂರ್ ಸಿಲ್ಕ್, ಜಾರ್ಜಟ್ ಸಿಲ್ಕ್, ಮಿನಿ ಕಂಚಿ, ಕಾಶ್ಮೀರ್ ಸಿಲ್ಕ್, ಕಾಟನ್ ಸಿಲ್ಕ್, ಫ್ಯಾನ್ಸಿ ಸಾರೀಸ್, ಕಾಟನ್ ಸಿಲ್ಕ್, ಸಿಂಥೆಟಿಕ್ ಸಾರೀಸ್, ಸಲ್ವಾರ್ ಸೂಟ್ಸ್, ಲೇಹೆಂಗಾ, ಡ್ರೆಸ್ಸ್ ಮೆಟೆರಿಯಲ್, ನೆಟ್ ಸಾರೀಸ್, ಗಾದ್ವಲ್ ಸಿಲ್ಕ್, ಸಾಫ್ಟ್ ಸಿಲ್ಕ್, ಜಾರ್ಜಟ್ಟ್, ಶುದ್ಧ ಕ್ರೇಪ್, ಇನ್ನಿತರ ಅಲಂಕೃತ ರಂಗುರಂಗುಗಳ ವಿವಿಧ ತರದ ಸೀರೆಗಳು, ಸ್ತ್ರೀಯರು, ಪುರುಷರು ಮತ್ತು ಮಕ್ಕಳ ಎಲ್ಲಾ ತರದ ಸಿದ್ಧ ಉಡುಪುಗಳೂ ಲಭ್ಯ. ಸೀಸನಲ್ ಹಾಗೂ ಉದ್ಘಾಟನಾ ಶುಭಾವಸರದ ಸಲುವಾಗಿ ವಿವಿಧ ಸೀರೆಗಳು ಮತ್ತು ಆಯ್ದ ಉಡುಪುಗಳು, ಮತ್ತು ಸ್ಯಾಂಡಲ್ ಮತ್ತು ಶಾಲಾ ಮಕ್ಕಳ ಮತ್ತು ಎಲ್ಲಾ ತರದ ಬ್ಯಾಗುಗಳು ವಿಶೇಷ ಆಕರ್ಷಕ ದರದಲ್ಲಿ ಹಾಗೂ ರಿಯಾಯಿತಿ ಕ್ರಯದಲ್ಲಿ ನೀಡಲಾಗುವುದು ಎಂದೂ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಮಳಿಗೆಯನ್ನು ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಸಿದ್ಧ ಉಡುಪುಗಳ ಮಳಿಗೆಯನ್ನು ಲೋಕಾರ್ಪಣೆ ಗೈಯಲಿದ್ದಾರೆ. ಬಾಲಯೇಸು ಇಗರ್ಜಿಯ ಮೊಡಂಕಾಪು ಇದರ ಪ್ರಧಾನ ಧರ್ಮಗುರು ರೆ| ಫಾ| ಮ್ಯಾಕ್ಸಿಮ್ ನೊರೋನ್ಹಾ ಅವರು ದೀಪ ಬೆಳಗಿಸಿ ಆಶೀರ್ವಚನ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಅಲ್ಪಸಂಖ್ಯಾತ ಘಟಕದ ದ.ಕ ಜಿಲ್ಲಾಧ್ಯಕ್ಷ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮಹಮ್ಮದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಸ್ಟ್ ಶೈಕ್ಷಣಿಕ ಸಂಸ್ಥೆ (ಪೆರ್ಲೀಯಾ) ಬಿ.ಸಿ ರೋಡ್ ಇದರ ಕಾರ್ಯಧ್ಯಕ್ಷೆ ಧನಭಾಗ್ಯ ರಮಾನಾಥ ರೈ, ಬಂಟ್ವಾಳ ಬುಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬಂಟ್ವಾಳ ಪುರಸಭಾ ಸದಸ್ಯ ಬಿ.ಮೋಹನ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಲಾಕಾ ಸಂಸ್ಥೆಯ ಸ್ಥಾನೀಯ ಪ್ರಾದೇಶಿಕ ಪ್ರಬಂಧಕ ಸಿರಿಲ್ ಕ್ರಾಸ್ಟ ಶಂಭೂರು, ಹಿರಿಯ ವ್ಯವಸ್ಥಾಪಕ ಫೆಲಿಕ್ಸ್ ವೇಗಸ್ ಮೊಡಂಕಾಪು, ಪ್ರಬಂಧಕಿ ರೀನಾ ಸಂದೀಪ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *