- ಕಲ್ಲಿಕೋಟೆ, ಏ.16-ಅಬುಧಬಿಯಿಂದ ಒಂದು ವಿಮಾನದಲ್ಲಿ ಇಲ್ಲಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬನಿಂದ ಅಬಕಾರಿ ಅಧಿಕಾರಿಗಳು ಸುಮಾರು 1 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

- ಈ ಬಿಸ್ಕೆಟ್‌ಗಳು ಸುಮಾರು ನಾಲ್ಕು ಕೆಜಿ ಇವೆ. ಸಫ್ವಾನ್ ಥಮ್ಯಿಲ್ ಎಂಬ ವ್ಯಕ್ತಿ ಈ ಬಿಸ್ಕೆಟ್‌ಗಳನ್ನು ಎಮರ್ಜೆನ್ಸಿಲೈಟ್ ಒಂದರಲ್ಲಿ ಅಡಗಿಸಿಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಥಳಿ ಪರಂಬದವನು ಎಂದು ಬಂಧಿತ ಸಫೈಲ್‌ನನ್ನು ಗುರುತಿಸಲಾಗಿದೆ.
