ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಎಲ್ಲಡೆ ಕುಡಿಯುವ ನೀರಿಗಾಗಿ ಹಾಹಾಕಾರ, ನೀರಿಗಾಗಿ ಪರಿತಪಿಸುತ್ತಿರುವ ಜನ, ಟ್ಯಾಂಕರ್ ಮೂಲಕ ನೀರು ಸಮಸ್ಯೆಯಿರುವ ಕಡೆಗಳಿಗೆ ಸಪ್ಲಾಯಿ ಮಾಡುವಂತೆ ಅಧಿಕಾರಿಗಳ ಸೂಚನೆ, ನೀರು ಪೋಲು ಮಾಡಂತೆ ಎಚ್ಚರಿಕೆ ನೀಡಿಯೂ ಅಲ್ಲಲ್ಲಿ ಅಕ್ರಮವಾಗಿ ಕುಡಿಯುವ ನೀರಿನ ಬಳಸಿ ತೋಟಗಳಿಗೆ ಉಪಯೋಗಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಅದಕ್ಕಾಗಿ ಬಂಟ್ವಾಳ ತಾಲೂಕಿನ ಎಲ್ಲಾ ಗ್ರಾ.ಪಂ.ನ ಕುಡಿಯುವ ನೀರು ನಳ್ಳಿ ಇರುವ ಮನೆಗಳಿಗೆ ಮೀಟರ್ ಆಳವಡಿಕೆ ಮಾಡಲಾಗುತ್ತಿದೆ.
ಫೆಬ್ರವರಿ-ಮಾ. ತಿಂಗಳು ಕಳೆಯುವಷ್ಟರಲ್ಲೇ ತಾಲೂಕಿನಲ್ಲಿ ಆರಂಭಗೊಳ್ಳುವ ನೀರ ಸಮಸ್ಯೆ ಈಗ ಮತ್ತೆ ಎದುರಾಗಿದೆ. ತಾಲೂಕಿನ 47 ಗ್ರಾಮಪಂಚಾಯತ್ಗಳ ಪೈಕಿ ಸುಮಾರು 30 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈಗಲೇ ನೀರಿನ ಬವಣೆ ಕಾಡುತ್ತಿದ್ದು, ಬಂಟ್ವಾಳಕ್ಕೆ ಬರಬಾರದ ಬರ ಬಂದೀತೇ..? ಎಂಬ ಆತಂಕದಲ್ಲಿ ಬಂಟ್ವಾಳದ ಜನತೆಯಿದೆ.


ಅಮ್ಟಾಡಿ, ಬಾಳೆಪುಣಿ,ಬಾಳ್ತಿಲ,ಚೆನ್ನೈತ್ತೋಡಿ,ಕಡೇಶ್ವಾಲ್ಯ,ಕರಿಯಂಗಳ, ಕರೋಪಾಡಿ, ಕಾವಳಪಡೂರು, ಕಾವಳ ಮೂಡೂರು, ಕೆದಿಲ,ಕೇಪು, ಕುಕ್ಕಿಪ್ಪಾಡಿ,ಕೊಳ್ನಾಡು,ಮಾಣಿ,ನರಿಂಗಾನ,ನಾವೂರು,ಪೆರ್ನೆ,ಪೆರುವಾಯಿ,ಪಿಲಾತಬೆಟ್ಟು,ಸಜಿಪಮೂಡ,ಸಜಿಪಮುನ್ನೂರು,ಸಂಗಬೆಟ್ಟು,ಸರಪಾಡಿ,ತುಂಬೆ, ಉಳಿ, ವಿಟ್ಲ, ವಿಟ್ಲ ಮುಡ್ನೂರು,ಬಡಗಬೆಳ್ಳೂರು, ಪಜೀರು, ವಿಟ್ಲ ಪಡ್ನೂರು ಗ್ರಾಮಪಂಚಾಯತ್ ನಲ್ಲಿ ಈ ಗಾಗಲೇ ನೀರಿನ ಬವಣೆಯ ಮುನ್ಸೂಚನೆಗಳು ಬಂದಿದ್ದು, ಅದಕ್ಕೆ ಪೂರ್ವಭಾವಿ ವ್ಯವಸ್ಥೆಯನ್ನು ಪಂಚಾಯತ್ಗಳು ಕೈಗೆತ್ತಿಕೊಂಡಿವೆ. ಬಾಳೆಪುಣಿ, ರಾಯಿ, ನರಿಂಗಾನ, ಬಡಗಬೆಳ್ಳೂರು, ಕಾವಳಪಡೂರು, ಪಂಜಿಕಲ್ಲು, ಕೊಳ್ನಾಡು ಗ್ರಾಮಪಂಚಾಯತ್ ಗಳಿಂದ ಟ್ಯಾಂಕರ್ ಗಳ ಬೇಡಿಕೆ ಬಂದಿದೆ
ಭೂಮಿಯಲ್ಲಿ ಧಗೆ ಏರುತ್ತಿದೆ. ನೀರಿನ ಮೂಲಗಳು ದಿನದಿಂದ ದಿನಕ್ಕೆ ಬತ್ತುತಿದೆ. ಒಂದು ತಿಂಗಳ ಹಿಂದೆ ನೀರಿನಿಂದ ತುಂಬಿ ತುಳುಕುತ್ತಿದ್ದ ನದಿಗಳೆಲ್ಲಾ ಈಗ ನೀರಿಲ್ಲದೆ ಸೊರಗಿ ಹೋಗಿದೆ. ಇದು ಜಿಲ್ಲೆಯ ಜೀವನದಿ ಎನಿಸಿರುವ ನೇತ್ರಾವತಿ ನದಿ ಬರಡಾಗಿರುವ ದೃಶ್ಯ. ಕಳೆದ ಕೆಲ ದಿನಗಳವರೆಗೂ ಸಮೃದ್ದ ನೀರಿನಿಂದ ತುಂಬಿ ಹರಿಯುತಿದ್ದ ನೇತ್ರಾವತಿ ಈಗ ಬರಡಾಗಿ ಹೋಗಿದ್ದಾಳೆ. ನದಿಯಲ್ಲಿ ನೀರಿಗಿಂತಲೂ ಹೆಚ್ಚಾಗಿ ತಳ ಭಾಗದಲ್ಲಿರುವ ಕಲ್ಲುಗಳು ಮಾತ್ರ ಕಂಡು ಬರುತ್ತಿದೆ. ಪರಿಸ್ಥಿತಿ ಹಿಗೇಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುವ ಲಕ್ಷಣಗಳು ಕಂಡು ಬರುತ್ತಿದೆ.
ಜಿಲ್ಲೆಯ ಕೇಂದ್ರಸ್ಥಾನ ಮಂಗಳೂರಿಗೆ ನೀರು ಸರಬರಾಜಾಗುವುದು ಜೀವನದಿ ನೇತ್ರಾವತಿಯಂದಲೇ. ತುಂಬೆ ವೆಂಟೆಡ್ ಡ್ಯಾಂನ ಮೂಲಕ ನೀರು ಮಂಗಳೂರಿಗೆ ಪೂರೈಕೆಯಾಗುತ್ತಿದೆ. ಕಳೆದ ವರ್ಷ ಮಾಚರ್್ ಕೊನೇ ವಾರದಲ್ಲಿ 13 ಅಡಿ ನೀರಿತ್ತು. ಈ ಬಾರಿ ಅದು 12.1 ಅಡಿಗೆ ಕುಸಿದಿದೆ. 10 ಅಡಿಗಿಂತ ಕಡಿಮೆಯಾದರಂತೂ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅಧಿಕಾರಿಗಳ ಪ್ರಕಾರ ತುಂಬೆ ಡ್ಯಾಂನಲ್ಲಿ ನೀರು ಕಡಿಮೆಯಾದರೂ ಮಂಗಳೂರಿಗೆ ನೀರಿನ ಸಮಸ್ಯೆಯಾಗದು. ಶಂಭೂರಿನಲ್ಲಿ ಪವರ್ ಪ್ರಾಜೆಕ್ಟ್ಗೆ ನಿಮರ್ಿಸಿದ ಡ್ಯಾಂನಲ್ಲಿ ಅಧಿಕ ಪಮಾಣದ ನೀರು ಶೇಖರಣೆಯಾಗಿರುವುದರಿಂದ ತುಂಬೆಯಲ್ಲಿ ನೀರು ಕಡಿಮೆಯಾದ ತಕ್ಷಣ ಶಂಭೂರಿನಿಂದ ನೀರು ಬಿಡುಗಡೆ ಮಾಡಲಾಗುತ್ತದೆ ಎನ್ನುತ್ತಾರೆ. ಆದರೂ ಮುಂದಿನ ದಿನಗಳಲ್ಲಿ ನೀರಿನ ಸದ್ಬಳಕೆಯ ಬಗ್ಗೆ ಈಗಲೆ ಜಾಗರೂಕರಾಗುರುವುದು ಒಳಿತು. ಮಳೆ ಬರುವುದು ಸ್ವಲ್ಪ ತಡವಾದರೂ ಜಿಲ್ಲೆಯಲ್ಲಿ ಜಲಕ್ಷಮ ಎದುರಾಗುವ ಭೀತಿ ತಪ್ಪಿದ್ದಲ್ಲ.

