ಸುದ್ದಿ9 ಕೈಕಂಬ: ಇತ್ತೀಚೆಗೆ ಮೆಸ್ಕಾಂ, ಬಿಜೈ ಶಾಖೆಯಲ್ಲಿ ಮೆಕ್ಯಾನಿಕ್ ದರ್ಜೆ-2 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಹೀರೆಗೌಡ ಅವರು ಕರ್ತವ್ಯದಿಂದ ನಿವೃತ್ತಿ ಹೊಂದಿ ಬಿಳ್ಕೊಡುವ ಸಂಮಾರಂಭದಲ್ಲಿ ಹಿರೇಗೌಡ ದಂಪತಿಗಳನ್ನು ಬಿಜೈ, ಮಲ್ಲಿಕಟ್ಟೆ ಶಾಖೆಯ ಅಧಿಕಾರಿ/ನೌಕರರು ಮತ್ತು ಕಂಪೆನಿಯ ವತಿಯಿಂದ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮೆಸ್ಕಾಂ ನಂ-1 ಅತ್ತಾವರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಸುನಿಲ್ ಮೊಂತೆರೋ ವಹಿಸಿದ್ದರು. ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಮಂಜಪ್ಪ, ಮಣ್ಣಗುಡ್ಡ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಚಂದ್ರಶೇಖರ ಪೂಜಾರಿ, ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘದ ಹಿರಿಯ ಕಾರ್ಮಿಕ ಮುಖಂಡ ಕೆ.ಶಶೀಂದ್ರ, ಸಂಘಟನಾ ಕಾರ್ಯದರ್ಶಿ ಗುರುಮೂರ್ತಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರೆಹಮಾತ್, ಭೋಜ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆ ಮುಖಂಡರಾದ ಎ.ಕೆ.ನಾಗರಾಜ, ಗಿರಿಯಪ್ಪ ಹಾಗೂ ಹನುಮಂತ, ಸಹಾಯಕ ಲೆಕ್ಕಾಧಿಕಾರಿ ದಿನೇಶ್, ಬಿಜೈ ಮಲ್ಲಿಕಟ್ಟೆ ಹಾಗೂ ಇತರ ಶಾಖೆಗಳ ಅಧಿಕಾರಿ ನೌಕರರು ಮತ್ತು ಹಿರೇಗೌಡರ ಹಿತೈಷಿಗಳು ಉಪಸ್ಥಿತರಿದ್ದರು.
ಬಿಜೈ ಶಾಖೆಯ ಸಹಾಯಕ ಇಂಜಿನಿಯರ್(ವಿ) ಬೈಜು ಕೆ.ನಾಯರ್ ಸ್ವಾಗತಿಸಿದರು. ಶೇಖರ್ ಶೆಟ್ಟಿಗಾರ್ ಪ್ರಾರ್ಥಿಸಿ, ಧನ್ಯವಾದವಿತ್ತರು. ಮಾರುತಿ ಸಿಂಗಾಡಿ ಪರಿಚಯ ಪತ್ರ ವಾಚಿಸಿದರು. ಮಲ್ಲಿಕಟ್ಟೆ ಶಾಖೆಯ ಕಿರಿಯ ಇಂಜಿನಿಯರ್(ವಿ) ಜೋನ್ ಬ್ಯಾಪಿಸ್ಟ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.
