ಬರ್ಮರ್: ಬರ್ಮರ್ ಲೋಕಸಭಾ ಕ್ಷೇತ್ರದಿಂದಲೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಸೋಮವಾರ ಪಕ್ಷೇತರ ಅಭ್ಯರ್ಯಾಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬರ್ಮರ್ ಕ್ಷೇತ್ರದಲ್ಲಿ ತನಗೆ ಟಿಕೆಟ್ ನಿರಾಕರಿಸಿ ಕಾಂಗ್ರೆಸ್ನಿಂದ ಬಂದ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎಂದು ಜಸ್ವಂತ್ ಕಿಡಿಕಾರಿದ್ದರು.

ಪಕ್ಷ ಟಿಕೆಟ್ ನೀಡದಿದ್ದರೆ ಬಂಡಾಯ ಅಭ್ಯರ್ಯಾಥಿಯಾಗಿ ಚುನಾವಣೆಗೆ ಸ್ಪರ್ದಿವುದಾಗಿದಾಗಿ ಜಸ್ವಂತ್ ಮೊದಲೇ ತಿಳಿಸಿದ್ದರು. ಕೊನೆಗೂ ಪಕ್ಷ ತನ್ನ ನಿಧರ್ಾರವನ್ನು ಬದಲಿಸದ ಕಾರಣ ಜಸ್ವಂತ್ ಸಿಂಗ್ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ಿಸಲು ಮುಂದಾಗಿದ್ದಾರೆ. ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ರಾಜ್ನಾಥ್ ಸಿಂಗ್ ವಿರುದ್ಧ ಟೀಕಾ ಪ್ರಹಾರಗೈದರು. ಇವರಿಂದಲೇ ನನಗೆ ಬರ್ಮರ್ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಯಿತು ಎಂದು ಜಸ್ವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
