ಬಂಟ್ವಾಳ:ತಾಲ್ಲೂಕಿನ ಶಂಭೂರು ಸರಕಾರಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮರಣಾರ್ಥ ಶನಿವಾರ ರಾತ್ರಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 60 ಕೆ.ಜಿ. ವಿಭಾಗದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವನ್ನು ತಾ.ಪಂ.ಅಧ್ಯಕ್ಷ ಯಶವಂತ ಡಿ.ಉದ್ಘಾಟಿಸಿದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಮತ್ತು ಶೇಡಿಗುರಿ ಯುವ ಸಂಗಮ ಯುವಕ ಮಂಡಲ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ತಾ. ಪಂ. ಸದಸ್ಯ ಆನಂದ ಎ. ಶಂಭೂರು, ಕಾಂಗ್ರೆಸ್ ಮುಖಂಡ ಕೆ. ಹರಿಕೃಷ್ಣ ಬಂಟ್ವಾಳ್, ಉದ್ಯಮಿ ಪದ್ಮನಾಭ ಮಯ್ಯ, ನಿವೃತ್ತ ಶಿಕ್ಷಕ ಎನ್.ಕೃಷ್ಣರಾಜ ಶೆಟ್ಟಿ, ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಅಮೆಚೂರು ಕಬಡ್ಡಿ ಎಸೋಸಿಯೇಶನ್ ರಾಜ್ಯ ಮಟ್ಟದ ತೀಪರ್ುಗಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ ಬಂಗೇರ, ವಕೀಲ ನರೇಂದ್ರನಾಥ ಭಂಡಾರಿ, ಸೀತಾರಾಮ ಶೆಟ್ಟಿ, ದೈಹಿಕ ಶಿಕ್ಷಕ ಚಿನ್ನಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಮತ್ತಿತರರು ಶುಭ ಹಾರೈಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿ. ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್ ಮತ್ತಿತರರು ಭೇಟಿ ನೀಡಿದರು.
ಇದೇ ವೇಳೆ ರಾಜ್ಯ ತೀರ್ಪ್ಗಾರರಾಗಿ ಆಯ್ಕೆಯಾದ ಸುರೇಶ್ ಮೈರಡ್ಕ ಇವರನ್ನು ಗೌರವಿಸಲಾಯಿತು.
ಸಂಘಟಕ ಕೇಶವ ನಾಯ್ಕ ಸ್ವಾಗತಿಸಿ, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ವಂದಿಸಿದರು.
ಫಲಿತಾಂಶ:
ದಿಂಡಿಕೆರೆ ಫ್ರೆಂಡ್ಸ್ ಪ್ರಥಮ, ನವಯುಗ ಕುಕ್ಕಾಜೆ ದ್ವಿತೀಯ, ನವಯುಗ ಬಿ. ತೃತೀಯ, ಎಂ.ಎಂ. ಕಾಪಿಕಾಡು ಚತುರ್ಥ ಬಹುಮಾನ ಪಡೆದಿದೆ.
ಉತ್ತಮ ರೈಡರ್ ಉನೈಸ್, ಹಿಡಿತಗಾರ ಫಯಾಜ್ ದಿಂಡಿಕೆರೆ, ಆಲ್ರೌಂಡರ್ ಸತ್ಯಾ ಕುಕ್ಕಾಜೆ ಇವರಿಗೆ ದೊರೆಯಿತು.