- ಮೂಡುಬಿದರೆ: ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮೂಡುಬಿದರೆಯ ಕಲ್ಲಬೆಟ್ಟು ಮಾರಿಗುಡಿ ಬಳಿಯ ಪಂಚರತ್ನ ಮೈದಾನದಲ್ಲಿ ನಡೆಯುತ್ತಿರುವ ಅಟೋಕ್ರಾಸ್-2015ರ ಮೊದಲ ದಿನವಾದ ಶನಿವಾರ ಬೈಕ್ಗಳ ಸಾಹಸ ಪ್ರದರ್ಶನ ಹಾಗೂ ಸೂಪರ್ ಬೈಕ್ಗಳ ಪ್ರದರ್ಶನ ನಡೆಯಿತು.
ಮೈಸೂರಿನ ಎಕ್ಸ್ರೈಡರ್ಸ್ನ 4 ಮಂದಿ ಸದಸ್ಯರಿಂದ ವಿವಿಧ ರೀತಿಯಲ್ಲಿ ಬೈಕ್ ಸಾಹಸ ಪ್ರದರ್ಶನವಿತ್ತು. 




ಕೋಸ್ಟಲ್ ಬೈಕರ್ಸ್ ಅವರಿಂದ ಮೂಡುಬಿದರೆಯ ಅಬುಲ್ ಅಲಾ ಪುತ್ತಿಗೆ ನೇತೃತ್ವದಲ್ಲಿ ಹೊಸ ತಂತ್ರಜ್ಞಾನವನ್ನು ಹೊಂದಿರುವ ದುಭಾರಿ ಬೆಲೆಯ ಸೂಪರ್ ಬೈಕ್ಗಳ ಪ್ರದರ್ಶನವಿತ್ತು. 25ರಷ್ಟು ಸೂಪರ್ ಬೈಕ್ಗಳು ಪಂಚರತ್ನ ಮೈದಾನದಲ್ಲಿ ಕೆಲಕಾಲ ಸಂಚರಿಸಿದವು.
ತ್ರಿಭುವನ್ ಅಟೋ ಮೋಟಿವ್ ಸ್ಪೋರ್ಟ್ಸ್ ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಚೆಂಗಪ್ಪ ಬೈಕ್ ಸಾಹಸ ಪ್ರದರ್ಶನ ಹಾಗೂ ಸೂಪರ್ ಬೈಕ್ಗಳ ಬಗ್ಗೆ ವಿವರ ನೀಡಿದರು.



