ಬಜಪೆ: ಕಿನ್ನಿಕಂಬಳ ಬಸ್‍ಸ್ಟಾಂಡ್ ಬಳಿ ಎ.1 ಬುಧವಾರದಂದು ನಡೆದ ಕಟೀಲು ಮೇಳದ ಬಯಲಾಟದಲ್ಲಿ ಸೇವಾಕರ್ತಾರಾದ ಶ್ರೀಮತಿ ನಾಗೇಶ್ ಜೋಗಿ ಮತ್ತು ಸಹೋದರರ ವತಿಯಿಂದ ಐದನೇ ಮೇಳದ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ಮತ್ತು ಕಲಾವಿದರಾದ ಮೋಹನ್ ಕುಮಾರ್ ಅಮ್ಮುಂಜೆ, ದಿವಾಣ ಶಿವಶಂಕರ್ ಭಟ್ ಅವರನ್ನು ಸಮ್ಮಾನಿಸಲಾಯಿತ್ತು ಮತ್ತು ಮೇಳದ 15 ಹಿರಿಯ ಕಲಾವಿದರಿಗೆ ಗೌರವರ್ಪಣೆ ಸಲ್ಲಿಸಲಾಯಿತ್ತು.


ಎಂ.ನರಸಿಂಗ ರೈ, ಅರ್ಚಕರಾದ ಉಮೇಶ್ ನಾಥ್ .ಜಿ.ಜೋಗಿಮಠ, ಕೆ. ಶ್ರೀಧರ್‍ರಾವ್, ಗಂಗಾಧರ್ ಜೋಗಿ,ಉಮೇಶ್ ಭಂಡಾರಿ, ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಮತ್ತು ಶ್ರೀಮತಿ ನಾಗೇಶ್ ಜೋಗಿ ಮತ್ತು ಸಹೋದರರು ಉಪಸ್ಥಿತರಿದ್ದರು ನಂತರ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.
