ಬಂಟ್ವಾಳ: ಹದಿಹರಯದ ಯುವತಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪದ್ಮಾವತಿ ಎಂಬವರ ಮಗಳು ಪದ್ಮಾವತಿ 24 ಕಾಣೆಯಾದ ಯುವತಿ. ಬೀಡಿ ಕೆಲಸ ಮಾಡುತ್ತಿದ್ದ ಈಕೆ ಬಂಟ್ವಾಳ ಪೇಟೆಗೆ ಹೋಗಿ ಬರುತ್ತೇನೆಂದು ಹೋದವಳು ಮನಗೆ ವಾಪಸು ಬರದೆ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಣೆಯಾದ ಯುವತಿ ಯವಕನೊಂದಿಗೆ ಪರಾರಿಯಾಗಿರಬೇಕು ಎಂಬ ಸಂಶಯ ಮನೆಮಂದಿಗಿದೆ. ಈಕೆಗೆ ಬ್ರಹ್ಮರಕೋಟ್ಲುವಿನ ಯುವಕನೊಂದಿಗೆ ಪ್ರೇಮವಿದ್ದು ಆತನೊಂದಿಗೆ ಹೋಗಿರಬೇಕು ಎಂಬ ಸಂಶಯ ಮೂಡುತ್ತಿದೆ. ಈತ ಕೂಡಾ ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
