ಮೂಡುಬಿದಿರೆ : ಮೂಡುಬಿದಿರೆ ಪುರಸಭೆಯಲ್ಲಿ ಮಂಗಳವಾರ ನಡೆದ ಪುರಸಭಾ ಮಾಸಿಕ ಸಭೆಯಲ್ಲಿ 2015-16ರ ಸಾಲಿನಲ್ಲಿ 23.59 ಕೋಟಿ ರೂಪಾಯಿ ವೆಚ್ಚದ ಬಜೆಟ್ ಮಂಡಿಸಲಾಗಿದೆ. ಪುರಸಭಾಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಿತು. ಪುರಸಭೆಯ ಆರಂಭಿಕ ಶುಲ್ಕು 7,70,04,752 ಜಮೆ 15,88,84,954 ರೂಪಾಯಿ ಸಹಿತ 23.59 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದ್ದು 15,51,23,154ರೂಪಾಯಿ ಖರ್ಚು ಹಾಗೂ 8,07,65,752 ಅಂತಿಮ ಮೊತ್ತದೊಂದಿಗೆ 37.61 ಲಕ್ಷ ಉಳಿತಾಯದ ಬಜೆಟನ್ನು ಮಂಡಿಲಾಗಿದೆ.
mbd_march31_4 (3)

mbd_march31_4 (2)
ಆದಾಯದಲ್ಲಿ ಕಟ್ಟಡ ತೆರಿಗೆಯಿಂದ 76.07ಲಕ್ಷ, ಕಟ್ಟಡಗಳ ಬಾಡಿಗೆಯಿಂದ 48ಲಕ್ಷ, ಕಟ್ಟಡ ಪರವಾನಗಿಯಿಂದ 25.5ಲಕ್ಷ, ಉದ್ಯಮ ಪರವಾನಗಿಯಿಂದ 6 ಲಕ್ಷ, ಬಸ್‍ಸ್ಟ್ಯಾಂಡ್ ಫೀಸ್‍ನಿಂದ 1.5ಲಕ್ಷ, ನೀರಿನ ಶುಲ್ಕ 65 ಲಕ್ಷ, ನೀರಿನ ಸಂಪರ್ಕ 6 ಲಕ್ಷ, ಆಸ್ತಿ ತೆರಿಗೆ ದಂಡ 4ಲಕ್ಷ, ಖಾತಾ ಬದಲಾವಣೆ 1.50 ಲಕ್ಷ, ಜಾಹೀರಾತು ತೆರಿಗೆ 6.5 ಲಕ್ಷ, ಎಸ್‍ಎಫ್‍ಸಿ ಮುಕ್ತ ನಿಧಿ 3.5ಕೋಟಿ, 14ನೇ ಹಣಕಾಸು ಸಾಮಾನ್ಯ ಮೂಲ ಅನದಾನ 1.15ಕೋಟಿ, 14ನೇ ಹಣಕಾಸು ರಸ್ತೆ ಮತ್ತು ಸೇತುವೆ ಅನುದಾನಕ್ಕೆ 28ಲಕ್ಷ, 14ನೇ ಹಣಕಾಸು ಸಾಮಾನ್ಯ ಕಾರ್ಯಾಧಾರಿತ ಅನುದಾನ 1.10ಕೋಟಿ, ವಿಶೇಷ ಅನುದಾನ 25 ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ 25ಲಕ್ಷ ನಿರೀಕ್ಷಿಸಲಾಗಿದೆ.
ಎಸ್‍ಎಫ್‍ಸಿ ಮುಕ್ತನಿಧಿ ನಿರೀಕ್ಷಿತ ಅನುದಾನದಲ್ಲಿ ರಸ್ತೆಕಾಮಗಾರಿಗೆ ಒಂದು ಕೋಟಿ, ನೀರಿನ ಕಾಮಗಾರಿಗೆ 59.77ಲಕ್ಷ, ಚರಂಡಿ ನಿರ್ಮಾಣಕ್ಕೆ 70ಲಕ್ಷ, 14ನೇ ಹಣಕಾಸು ಸಾಮಾನ್ಯ ಮೂಲ ನಿರೀಕ್ಷಿತ ಅನುದಾನದಲ್ಲಿ ಚರಂಡಿ ರಚನೆಗೆ 23ಲಕ್ಷ, ಉದ್ಯಾನವನಕ್ಕೆ 11.50ಲಕ್ಷ, ಕಟ್ಟಡ ದುರಸ್ತಿಗೆ 5.75ಲಕ್ಷ, ಒಳಚರಂಡಿ ಮಂಡಳಿಗೆ 28.75ಲಕ್ಷ, ದಾರಿದೀಪಕ್ಕೆ 15 ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ 28.75ಲಕ್ಷ, 14ನೇ ಹಣಕಾಸು ಸಾಮಾನ್ಯ ಕಾರ್ಯಾಧಾರಿತ ಅನುದಾನಕ್ಕೆ ಚರಂಡಿ ರಚನೆಗೆ 22 ಲಕ್ಷ, ಉದ್ಯಾನವನಕ್ಕೆ 11ಲಕ್ಷ, ಕಟ್ಟಡ ದುರಸ್ಥಿಗೆ 5.50 ಲಕ್ಷ, ಒಳಚರಂಡಿ ಮಂಡಳಿಗೆ 27.5ಲಕ್ಷ, ದಾರಿದೀಪ 16.5ಲಕ್ಷ, ಘನತ್ಯಾಜ್ಯ 27.5 ಲಕ್ಷ, 14ನೇ ಹಣಕಾಸು ರಸ್ತೆ ಮತ್ತು ಸೇತುವೆಗೆ ನಿರೀಕ್ಷಿತ ಅನುದಾನ 22ಲಕ್ಷವನ್ನು ಕಾದಿರಿಸಲಾಗಿದೆ.
ಪುರಸಭಾ ನಿಧಿಯಿಂದ ರಸ್ತೆ ಮತ್ತು ಚರಂಡಿ ದುರಸ್ಥಿಗೆ 50 ಲಕ್ಷ, ಸೇತುವೆ ದುರಸ್ಥಿಗೆ 5 ಲಕ್ಷ, ನೀರಿನ ಪಂಪು ದುರಸ್ಥಿ ಮತ್ತು ಲೀಕೇಜಿಗೆ 15ಲಕ್ಷ ಕಾದಿರಿಸಲಾಗಿದೆ. ದಾರಿದೀಪ ನಿರ್ವಹಣೆಗೆ 12ಲಕ್ಷ, ಮಳೆನೀರಿನ ಚರಂಡಿ ದುರಸ್ಥಿಗೆ 10ಲಕ್ಷ, ಹೊಲಿಗೆ ಯಂತ್ರ ವಿತರಣೆಗೆ 5ಲಕ್ಷ, ಅಂಗನವಾಡಿ ಕಟ್ಟಡ ದುರಸ್ಥಿಗೆ 10ಲಕ್ಷ, ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 23ಲಕ್ಷ, ತಂಗುದಾಣ ನಿರ್ಮಾಣಕ್ಕೆ 17ಲಕ್ಷ, ಕಮಾನು ನಿರ್ಮಾಣಕ್ಕೆ 10ಲಕ್ಷ, ನೌಕರರ ವಸತಿ ಗೃಹ ನಿರ್ಮಾಣಕ್ಕೆ 40ಲಕ್ಷ, ರಾಜೀವಗಾಂಧಿ ವಾಣಿಜ್ಯ ಸಂಕೀರ್ಣಕ್ಕೆ ಮೂರನೇ ಮಹಡಿ ನಿರ್ಮಾಣಕ್ಕೆ 20ಲಕ್ಷ, ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ 2ನೇ ಮಹಡಿಗೆ 20ಲಕ್ಷ, ಆಡಿಟ್ ಚಾರ್ಜ್ 5ಲಕ್ಷ, ಕಛೇರಿ ಉಪಕರಣಕ್ಕೆ 5ಲಕ್ಷ, ಕಛೇರಿ ಪೀಟೋಪಕರಣಗಳಿಗೆ 2ಲಕ್ಷ ಕಾಯ್ದಿರಿಸಲಾಗಿದೆ.
ಶೇ.24.10 ನಿಧಿಗೆ ಎಸ್‍ಎಫ್‍ಸಿ ನಿಧಿಯಿಂದ 84.35ಲಕ್ಷ ಪುರಸಭಾ ನಿಧಿಯಿಂದ 7.84ಲಕ್ಷ, ಶೇ.7.25ರ ನಿಧಿಗೆ ಎಸ್‍ಎಫ್‍ಸಿ ನಿಧಿಯಿಂದ 25.38ಲಕ್ಷ, ಪುರಸಭಾ ನಿಧಿಯಿಂದ 2.36ಲಕ್ಷ, ಶೇ.3 ನಿಧಿಗೆ ಎಸ್‍ಎಫ್‍ಸಿ ನಿಧಿಯಿಂದ 10.50ಲಕ್ಷ, ಪುರಸಭಾ ನಿಧಿಯಿಂದ 0.98ಲಕ್ಷ ಮೀಸಲಿರಿಸಲಾಗಿದೆ.

By suddi9

Leave a Reply

Your email address will not be published. Required fields are marked *