ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಎಂಬಲ್ಲಿ ರೂ 75ಲಕ್ಷ ವೆಚ್ಚದಲ್ಲಿ ಪುನರ್ನವೀಕರಣಗೊಳ್ಳುತ್ತಿರುವ ಶ್ರೀ ಕೋದಂಡರಾಮಚಂದ್ರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರುಗೊಳಿಸಿದ ರೂ 5 ಲಕ್ಷ ಮೊತ್ತದ ಚೆಕ್ಕನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸುನಿತಾ ನಾಯಕ್ ಇವರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಪುರುಷೋತ್ತಮ ಬಂಗೇರ ನಾಟಿ ಇವರಿಗೆ ಸೋಮವಾರ ಹಸ್ತಾಂತರಿಸಿದರು.

ಮೇಲ್ವಿಚಾರಕ ಗಂಗಾಧರ್, ಸೇವಾನಿರತೆ ವಿಶಾಲಾಕ್ಷಿ, ಒಕ್ಕೂಟ ಅಧ್ಯಕ್ಷೆ ಮೀನಾಕ್ಷಿ, ಅರ್ಚಕ ಬಾಲಕೃಷ್ಣ ಭಟ್, ಪ್ರಮುಖರಾದ ಎನ್.ವಿಠಲ ಕೋಟ್ಯಾನ್, ಉದಯ ಸುವರ್ಣ, ಶ್ರೀನಿವಾಸ ನಾಟಿ, ವಾಮನ ಕುಲಾಲ್, ಜಯಂತಿ ಮತ್ತಿತರರು ಇದ್ದರು.
