ಮೂಡುಬಿದಿರೆ:ಅಶ್ವತ್ಥಪುರ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ಮಹಿಳೆಗೆ ಬೊಲೆರೋ ವಾಹನ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾರೆ.
ತೆಂಕಮಿಜಾರು ಗ್ರಾಮದ ಒಂಟಿಮಾರು ದಾಮು ಗೌಡ ಅವರ ಪತ್ನಿ ಕೂಲಿ ಕಾರ್ಮಿಕ ಜಾನಕಿ(55)ಮೃತಪಟ್ಟ ಮಹಿಳೆ. ಬುದವಾರ ಬೆಳಿಗ್ಗೆ ಇವರು ಕಿನ್ನಿಗೋಳಿಯಿಂದ ಬಂದ ಖಾಸಗಿ ಬಸ್ಸಿನಿಂದ ಅಶ್ವತ್ಥಪುರ ಕ್ರಾಸ್ ಎಂಬಲ್ಲಿ ಬಸ್ಸಿನಿಂದ ಇಳಿದು ಹಿಂಬದಿಯಿಂದ ರಸ್ತೆ ದಾಟುತ್ತಿದ್ದಾಗ ಮೂಡುಬಿದಿರೆಯಿಂದ ಕಿನ್ನಿಗೋಳಿಗೆ ಹೋಗುತ್ತಿದ್ದ ಬೊಲೆರೊ ಕಾರು ಮಹಿಳೆಗೆ ಡಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡ್ಯೊಯ್ಯುತ್ತಿದ್ದಾಗ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ವಾಹನ ಚಾಲಕ ವಿಜಯ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *