ಕಾಸರಗೋಡು: ಬಿಜೆಪಿಯ ಸಕರಿಯ ಕಾರ್ಯಕರ್ತನಾಗಿದ್ದ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆದಿದ್ದ ಸುರೇಶ್(46) ಎಂಬವರ ಕೊಲೆಯನನು ಖಂಡಿಸಿ ಇಂದು ಮಂಜೇಶ್ವರದಲ್ಲಿ ಬಂದ್ ನಡೆದಿದೆ.
ಹೊಸಂಗಡಿಯಲ್ಲಿನ ಅಲ್ಬು ಕರ್ಕ್ ಕಾಂಪ್ಲೆಕ್ಸ್‍ನಲ್ಲಿರುವ `ಟೈಮೇಕ್’ ವಾಚ್ ಅಂಗಡಿಯನ್ನು ಹೊಂದಿರುವ ಸುರೇಶ್‍ರವರು ಮಾ.16 ರಂದು ಮಧ್ಯಾಹ್ನ 2.30ರ ಸುಮಾರಿಗೆ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕತ್ತಿ ಯೊಂದಿಗೆ ಅಂಗಡಿಗೆ ನುಗ್ಗಿದ ಬಡಾಜೆ ನಿವಾಸಿ ಅಬ್ಬಕಪಿಟ್ಟಾ ಯಾನೆ ಅಬ್ದುಲ್ ಖಲೀಲ್(35) ಎಂಬಾತ ಚೂರಿ ಯಿಂದ ಸುರೇಶ್‍ಗೆ ಯದ್ವಾತದ್ವ ತಿವಿದು ಗಾಯಗೊಳಿಸಿದ್ದ.
ಬೊಬ್ಬೆ ಕೇಳಿ ಸ್ಥಳೀಯ ಅಂಗಡಿ ಯವರ ಸಹಿತ ನಾಗರೀಕರು ಸ್ಥಳಕ್ಕಾ ಗಮಿಸಿದಾಗ ಸುರೇಶ್‍ರವರು ರಕ್ತದ ಮಡುವಿನಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದರು. ಖಲೀಲ್ ಸೇರಿದ್ದ ಜನರನ್ನು ಕಂಡು ಪರಾರಿಯಾಗಲೆತ್ನಿಸಿದ್ದ. ಇದನ್ನು ಕಂಡ ನಾಗರಿಕರು ಆತನ್ನು ಸೆರೆಹಿಡಿದು ಮಂಜೇಶ್ವರ ಪೆÇಲೀಸರಿಗೊಪ್ಪಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಸುರೇಶ್‍ರವರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ಕೊಂಡು ಹೋದರಾದರೂ ದಾರಿ ಮಧ್ಯೆ ಅವರು ಮೃತಪಟ್ಟರೆಂದು ಸಂಬಂಧಿಕರು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ಸುರೇಶ್‍ರವರು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕದ ಸದಸ್ಯರಾಗಿದ್ದಾರೆ.

