ಬಂಟ್ವಾಳ:ಬಂಟ್ವಾಳ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ನಿವೃತ್ತಿಗೊಂಡ ಬಳಿಕ ಕಳೆದ ಎರಡು ತಿಂಗಳಿನಿಂದ ತೆರವಾಗಿದ್ದ ಹುದ್ದೆಗೆ ಕೊನೆಗೂ ಕಡಬ ವಿಶೇಷ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಭಾರ ತಹಶೀಲ್ದಾರ್ ಮಹಮ್ಮದ್ ಇಸಾಕ್, ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕ್, ಪರಮೆಶ್ವರ ಮೊಯಿಲಿ, ಭಾಸ್ಕರ ರಾವ್, ರೋಹಿನಾಥ್, ಜೆ.ಪಿ.ರಾಡ್ರಿಗಸ್, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಸಾಧು, ದಿವಾಕರ ಪಡ್ಜಾಲು ಮತ್ತಿತರರು ಇದ್ದರು.
