ಮಂಗಳೂರು: ಹಂತಕ ಪಡೆಯೊಂದು ಕ್ರೈಸ್ತ ಭಗಿನಿಯೋರ್ವರನ್ನು ರಿಕ್ಷಾದಲ್ಲಿ ಅಪಹರಣಕ್ಕೆ ಯತ್ನಿಸಿದ ಘಟನೆ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
30ರ ಹರೆಯವ ಭಗಿನಿ ಕಲೇಜೊಂದರಲ್ಲಿ ಫಿಸಿಯೋಥೆರಪಿ ಕೋರ್ಸ್ ಕ್ಲಾಸ್ ಮುಗಿಸಿ ಬಂಟ್ವಾಳದ ತುಂಬೆ ಕಡೆಯಿಂದ ಬಸ್ ಮೂಲಕ ಪಂಪ್-ವೆಲ್ ಗೆ ಬಂದು ನಂತರ ಅಲ್ಲಿಂದ ತನ್ನ ಹಾಸ್ಟೆಲ್‍ಗೆ ನಡೆದುಕೊಂಡು ಹೋಗುತ್ತಿದ್ದರು.

kidnapping

ಆ ಸಮಯದಲ್ಲಿ ನಾಲ್ಕು ಜನರ ಪಡೆ ಆಕೆಯನ್ನು ಅಡ್ಡಗಟ್ಟಿ ಸುತ್ತುವರೆದು ಆಟೋ ರಿಕ್ಷಾದ ಒಳಗೆ ತಳ್ಳಿದೆ. ನಂತರ ನಾಲ್ವರಲ್ಲಿ ಇಬ್ಬರು ಆಕೆಯನ್ನು ಆಟೋದಲ್ಲಿ ಕುಳ್ಳಿರಿಸಿ ನಂತೂರು ಕಡೆ ಹೊರಟಿದ್ದಾರೆ. ಈ ಸಂದರ್ಭ ಅವರಲ್ಲಿ ಒಬ್ಬ ವ್ಯಕ್ತಿ ಆಕೆಯ ಬ್ಯಾಗ್, ವಾಚ್ ಮತ್ತು ಮೊಬೈಲ್ ದೋಚಿದ್ದಾನೆ.

ನಂತೂರು ಬರುವಷ್ಟರಲ್ಲಿ ರಿಕ್ಷ ಸ್ವಲ್ಪ ನಿಧಾನವಾಗಿ ಚಲಿಸುತ್ತಿದ್ದುದನ್ನು ಗಮನಿಸಿದ ಆ ಭಗಿನಿ ರಿಕ್ಷಾದಿಂದ ಹೊರಗೆ ಹಾರಿ ತಪ್ಪಿಸಿಕೊಂಡಿದ್ದಾರೆ. ಆದರೆ ಹಂತಕ ಪಡೆ ತಪ್ಪಿಸಿಕೊಂಡಿದೆ. ರಿಕ್ಷಾದಿಂದ ಹಾರುವ ಸಂದರ್ಭ ಕ್ರೈಸ್ತ ಭಗಿನಿಗೆ ಸ್ವಲ್ಪ ಏಟಾಗಿದ್ದು, ಸಾರ್ವಜನಿಕರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರದ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *