ಮಂಗಳೂರು: `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯ ಅನೇಕ ಕಾರ್ಯಕರ್ತರ ಮೇಲೆ ಹತ್ಯೆ, ಹತ್ಯೆಯ ಪ್ರಯತ್ನ, ಕೋಮು ಗಲಭೆ ಸೃಷ್ಟಿಸುವುದು, ಬಾಂಬ್ ತಯಾರಿಸುವುದು ಇಂತಹ ಅನೇಕ ಅಪರಾಧ ಪ್ರಕರಣಗಳ ಖಟ್ಲೆ ನಡೆಯುತ್ತಿದೆ. ಕೇರಳ ಸರಕಾರವು ಈ ಸಂಘಟನೆಯು ದೇಶವಿಘಾತಕ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಅಲ್ಲಿನ ನ್ಯಾಯಾಲಯದಲ್ಲಿ ಹೇಳಿದೆ. ಫೆಬ್ರವರಿ 19 ರಂದು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ವು ಶಿವಮೊಗ್ಗದಲ್ಲಿ ಮೆರವಣಿಗೆ ತೆಗೆದು ಅನಂತರ ಗಲಭೆ ನಡೆಸಿ, ಇಬ್ಬರು ಹಿಂದೂಗಳ ಹತ್ಯೆ ಮಾಡಿತು. ಆದ್ದರಿಂದ ದೇಶ ವಿಘಾತಕ ಹಾಗೂ ಉಗ್ರವಾದಿ ಚಟುವಟಿಕೆಗಳಲ್ಲಿ ತೊಡಗಿದ ಪಿಎಫ್‍ಐ’ಯನ್ನು ತಕ್ಷಣ ನಿಷೇಧಿಸಬೇಕು ಎಂದು ಹಿಂದೂಜನಜಾಗೃತಿ ಸಮಿತಿಯ ಸಮನ್ವಯಕರಾದ ವಿಜಯಕುಮಾರ ಆಗ್ರಹಿಸಿದ್ದಾರೆ.

3

1

2

ಅವರು ಮಾ. 15 ರಂದು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಎದುರು ಎಲ್ಲ ಹಿಂದೂಪರ ಸಂಘಟಣೆಗಳ ಕಾರ್ಯಕರ್ತರು ಹಾಗೂ ಧರ್ಮಾಭಿಮಾನಿಗಳು ಸೇರಿ ನಡೆಸಿದ ರಾಷ್ಟ್ರೀಯ ಹಿಂದೂ ಆಂದೋಲದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡುತ್ತಿದ್ದರು. 2012 ರಲ್ಲಿ ಕೇರಳದ ಆರಕ್ಷಕರು ಅಲ್ಲಿನ ಉಚ್ಚ ನ್ಯಾಯಾಲಯದಲ್ಲಿ ‘‘ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಯು ನಿಷೇಧಿತ ‘ಸಿಮಿ’ ಈ ದೇಶದ್ರೋಹಿ ಸಂಘಟನೆಯ ಹೊಸ ಮುಖವಾಡವಾಗಿದೆ. ಈ ಸಂಘಟನೆಯ ಅನೇಕ ಕಾರ್ಯಕರ್ತರು ‘ಸಿಮಿ’ಗೆ ಸಂಬಂಧಿತರಾಗಿದ್ದಾರೆ.

ಈ ಸಂಘಟನೆ ದೇಶವಿಘಾತಕ ಚಟುವಟಿಕೆಗಳಲ್ಲಿ ತೊಡಗಿದೆ’, ಎಂದೂ ಪ್ರತಿಜ್ಞಾಪತ್ರದಲ್ಲಿ ಹೇಳಿದ್ದಾರೆ. ಮತಗಳ ರಾಜಕಾರಣದಿಂದಲೇ ಈ ಸಂಘಟನೆಯ ಮೇಲೆ ಇದು ವರೆಗೆ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ಸಂಘಟನೆಯಿಂದ ಇನ್ನೂ ಭಯಾನಕ ಕೃತ್ಯಗಳು ಸಂಭವಿಸುವ ಮೊದಲೇ ಅದರ ಮೇಲೆ ಅಂಕುಶ ಹಾಕುವುದು ಅತ್ಯಂತ ಅವಶ್ಯಕವಿದೆ ಎಂದು ಈ ಸಂಧರ್ಭದಲ್ಲಿ ಸರಕಾರವನ್ನು ಆಗ್ರಹಿಸಿದರು. ಧರ್ಮಾಭಿಮಾನಿಯಾದ ಶ್ರೀ ಉದಯಶಂಕರ ಇವರು ಮಾತನಾಡುತ್ತಾ ಭಾರತದಲ್ಲೇ ವಾಸಿಸಿ ಪಾಕಿಸ್ತಾನ ಜಿಂದಾಬಾದ ಘೋಷಣೆಯನ್ನು ಹಾಕುತ್ತಾರೆ, ಅಫ್ಜಲ್ ಗುರುಗೆ ಶಿಕ್ಷೆಯಾದರೆ ಇವರು ಪ್ರತಿಭಟಣೆ ಮಾಡುತ್ತಾರೆ.

ಇಲ್ಲಿಯವರೆಗೆ ಪಿ.ಎಫ್.ಐ, ಸಂಘಟಣೆಯು ಅನೇಕ ರಾಷ್ಟ್ರದ್ರ್ರೋಹಿ ಕಾರ್ಯವನ್ನು ಮಡುತ್ತಿದೆ. ಆದರೂ ಕೆಲವು ಬುಧ್ಧಿಜೀವಿಗಳ ಸಹಕಾರದಿಂದ ಇದು ಇನ್ನೂ ಜೀವಂತವಾಗಿದೆ. ಅದಕ್ಕೆ ಕೂಡಲೇ ಸರಕಾರ ಈ ಸಂಘಟಣೆಯನ್ನು ನಿಷೇಧಿಸಬೇಕು ಎಂದು ಈ ಸಂಧರ್ಭದಲ್ಲಿ ಹೇಳಿದರು. ರಾಷ್ಟ್ರೀಯ ಹಿಂದೂ ಆಂದೋಲನ ವತಿಯಿಂದ ಶ್ರೀ ವಿವೇಕ ಪೈ ಇವರು ಮಾತನಾಡುತ್ತಾ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಈ ನಿಯೋಗವು ಇತ್ತೀಚೆಗೆ ಬಾಂಗ್ಲಾದೇಶದಲ್ಲಿನ ಢಾಕಾದಲ್ಲಿನ ಭಾರತೀಯ ಉಚ್ಚ ಆಯುಕ್ತರ ಕಛೇರಿಯನ್ನು ಭೇಟಿಯಾಗಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಮಾಹಿತಿ ನೀಡಿತು.

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮಾನವಾಧಿಕಾರಗಳ ರಕ್ಷಣೆ ಇದೊಂದು ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ ಹಿಂದೂಗಳ ವಿಷಯದಲ್ಲಿ ಘಟಿಸುತ್ತಿರುವ ಮಾನವಾಧಿಕಾರದ ಉಲ್ಲಂಘನೆಯ ಬಗ್ಗೆ ನಿಷ್ಪಕ್ಷಪಾತವಾಗಿ ಪರಿಶೀಲಿಸಲು ನ್ಯಾಯಾಧೀಶರ ಒಂದು ನಿಯೋಗವನ್ನು ಬಾಂಗ್ಲಾದೇಶಕ್ಕೆ ಕಳುಹಿಸಬೇಕು, ಎಂದೂ ಈ ಆಂದೋಲನದ ಮೂಲಕ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಮಹಾಸಭಾದ ಧಮೇಂದ್ರ, ಧರ್ಮಾಭಿಮಾನಿಗಳಾದ ಉದಯಶಂಕರ,ಲೋಕೇಶ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *