ಮೂಡುಬಿದರೆ: ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಶ್ಮಿ (17) ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದಾರೆ.
ಇವರು ಹೊಸಬೆಟ್ಟು ನಿವಾಸಿ ಕಾರ್ಪೆಂಟರ್ ಸೀತಾರಾಮ ಆಚಾರ್ಯರ ಪುತ್ರಿ. ಇವರು ಕಳೆದ 3 ತಿಂಗಳಿನಿಂದ ಬ್ರೈನ್ ಟ್ಯೂಮರ್ ಕಾಯಿಲೆಗೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.
