ಮೂಡುಬಿದಿರೆ: 10 ವರ್ಷಗಳ ಬಳಿಕ ಫೆ.8ರಂದು ಸ್ವಂತ ಸುಸಜ್ಜಿತ ಕಟ್ಟಡ ಭಾಗ್ಯ ಕಂಡ ಮೂಡುಬಿದಿರೆ ನ್ಯಾಯಾಲಯ ಮೇಲ್ದರ್ಜೆಗೆ ಏರುವುದರ ಮೂಲಕ ನ್ಯಾಯದಾನ ಪಡೆಯುವ ನಾಗರಿಕರಿಗೆ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ.
ಮೂಡುಬಿದಿರೆ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಹಿರಿಯ ಸಿವಿಲ್ ನ್ಯಾಯಾಲಯ ಆಗುವುದರ ಮೂಲಕ ಮೇಲ್ದರ್ಜೆಗೆ ಏರುತ್ತಿದೆ. ಮಾ.14ರಿಂದ ಮೂಡುಬಿದಿರೆ ವ್ಯಾಪ್ತಿಯ ನಾಗರಿಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ.

mbd_march11_1
ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ 5 ಲಕ್ಷಕ್ಕಿಂತ ಕೆಳಗಿನ ಸೂಟ್ ವ್ಯಾಲ್ಯು ದಾವೆ ಮೌಲ್ಯ) ಇತ್ಯರ್ಥವಾಗುತ್ತಿದ್ದು, ಇದೀಗ ಹಿರಿಯ ಸಿವಿಲ್ ನ್ಯಾಯಾಲಯ ಸ್ಥಾಪನೆಯೊಂದಿಗೆ 5 ಲಕ್ಷಕ್ಕಿಂತ ಹೆಚ್ಚಿನ ಸೂಟ್ ವ್ಯಾಲ್ಯು ಹೊಂದಿರುವ ಸಿವಿಲ್ ಕೇಸುಗಳು ಇತ್ಯರ್ಥವಾಗಲಿದೆ. ಈ ಹಿಂದೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಹಾಗೂ ಕಾರ್ಕಳಗಳಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಕೇಸುಗಳು ಇತ್ಯರ್ಥವಾಗುತ್ತಿತ್ತು. ಇನ್ನು ಮುಂದೆ ಅಂತಹ ಸಿವಿಲ್ ಕೇಸುಗಳು ಮೂಡುಬಿದಿರೆಯಲ್ಲಿ ಇತ್ಯರ್ಥವಾಗಲಿದೆ.
ಸಮಯ,ಶ್ರಮ ಉಳಿತಾಯ:
ಹಿರಿಯ ಸಿವಿಲ್ ನ್ಯಾಯಾಲಯದ ಕೇಸುಗಳ ವಿಚಾರಣೆ ಮೂಡುಬಿದಿರೆಯಲ್ಲಿ ಇನ್ನು ಮುಂದೆ ಆಗುವುದರಿಂದ ಮೂಡುಬಿದಿರೆ ಹೋಬಳಿಯ ಸಮಯ ಹಾಗೂ ಶ್ರಮ ಉಳಿತಾಯವಾಗಲಿದೆ. ಸುಸಜ್ಜಿತ ಕಟ್ಟಡ ಪಡೆದ ತಿಂಗಳೊಳಗೆ ಮೇಲ್ದರ್ಜೆಗೊಂಡಿರುವುದು ಜನತೆಯ ಅದೃಷ್ಟ ಎಂದು ಮೂಡುಬಿದರೆ ವಕೀಲರ ಸಂಘದ ಅಧ್ಯಕ್ಷ ಕೆ.ಆರ್ ಪಂಡಿತ್ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *