ಮೂಡುಬಿದರೆ: ರೋಟರಿ ಕ್ಲಬ್ ಆಫ್ ಮೂಡುಬಿದರೆ ಟೆಂಪಲ್ ಟೌನ್ಗೆ ರೋಟರಿ ವಲಯ 5ರ 3180 ಜಿಲ್ಲಾ ಗವರ್ನರ್ ಡಾ. ಭಾಸ್ಕರ್ ಎಸ್ ಭಾನುವಾರ ಅಧಿಕೃತ ಭೇಟಿ ನೀಡಿದರು.
ಈ ಪ್ರಯುಕ್ತ ರೋಟರಿ ಸಮ್ಮಿಲನ್ ಹಾಲ್ನಲ್ಲಿ ನಡೆದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಇತರರ ಬಾಳಿಗೆ ಬೆಳಕಾಗುವ ಮೊದಲು ದೀಪವಾಗುವ ಎನ್ನುವ ಧ್ಯೇಯದೊಂದಿಗೆ ಮುನ್ನಡೆದು, ಸೇವಾ ಭಾವನೆಯನ್ನು ನಮ್ಮಲ್ಲಿ ನಿರಂತರವಾಗಿ ಜಾಗೃತಗೊಳಿಸಬೇಕು. ರೋಟರಿ ಕ್ಲಬ್ನಲ್ಲಿ ಗಳಿಸುವ ನಾಯಕತ್ವ ಗುಣ ಸಮಾಜದ ಉನ್ನತಿಗೋಸ್ಕರ ಬಳಸಬೇಕೆಂದು ಕರೆಯಿತ್ತರು.

mbd_march9_8
ಸಹಾಯಕ ಜಿಲ್ಲಾ ಗವರ್ನರ್ ಅಶ್ವನಿ ಕುಮಾರ್ ರೈ `ರೋಟೌನ್’ ಬುಲೆಟಿನ್ ಬಿಡುಗಡೆಗೊಳಿಸಿದರು.
ಪಿಎಚ್ಎಫ್ ಗೌರವ ಪಡೆದ ಚಂದ್ರಹಾಸ್ ದೇವಾಡಿಗ, ರೋಬಟರ್್, ರೊನಾಲ್ಡ್ ಫೆನರ್ಾಂಡಿಸ್, ಪ್ರವೀಣ್ ಪಿರೇರಾ, ಅಬ್ದುಲ್ ರೆಹಮಾನ್, ಯುವರಾಜ್ ಜೈನ್ ಅವರನ್ನು ಗೌರವಿಸಲಾಯಿತು.
ನೂತನ ಸದಸ್ಯರಾದ ಅಶ್ವಿಲ್, ರೋಲ್ಸನ್ ಪಾಯಸ್, ಡೆನ್ನಿಸ್ ಪಿರೇರಾ, ಲೋಕೇಶ್ ಅವರನ್ನು ಕ್ಲಬ್ಗೆ ಸ್ವಾಗತಿಸಲಾಯಿತು.
ಮಾಳ ಗುರುಕುಲ ಅನುದಾನಿತ ಶಾಲೆಯನ್ನು ಕ್ಲಬ್ ದತ್ತು ಸ್ವೀಕಾರ ಮಾಡಿದ್ದು, ಸಮಾರಂಭದಲ್ಲಿ 25 ಸಾವಿರ ವೆಚ್ಚದ ಪುಸ್ತಕ, ಎಲ್ಸಿಡಿ ಪ್ರಾಜೆಕ್ಟ್ ವಿತರಿಸಲಾಯಿತು. ರೋಟರಿ ಸದಸ್ಯ ರಾಜೇಶ್ ಅವರ ಪ್ರಾಯೋಜಕತ್ವದಲ್ಲಿ ಕಲ್ಲಬೆಟ್ಟು ಸಕರ್ಾರಿ ಪ್ರಾಥಮಿಕ ಶಾಲೆಗೆ 60 ಸಾವಿರ ವೆಚ್ಚದಲ್ಲಿ ನಿಮರ್ಿಸಲಾದ ಶೌಚಗೃಹ ವ್ಯವಸ್ಥೆಯನ್ನು ಹಸ್ತಾಂತರಿಸಲಾಯಿತು.
ರೋಟರಿ ಕ್ಲಬ್ ಆಫ್ ಮೂಡುಬಿದರೆ ಟೆಂಪಲ್ ಟೌನ್ನ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ಚಂದ್ರಹಾಸ್ ದೇವಾಡಿಗ, ರೋಟರಿ ಕ್ಲಬ್ ಜಿಎಸ್ಆರ್ ಹರೀಶ್ ನಾಯಕ್, ರೋಟರಿ ಜಿಲ್ಲೆಯ ಪ್ರಥಮ ಮಹಿಳೆ ಮಂಜುಳಾ ಭಾಸ್ಕರ್, ಡಿಜಿಎನ್ ಭರತೇಶ್ ರೋಟರಿ ಪದಾಧಿಕಾರಿಗಳಾದ ಜಯರಾಮ್ ಕೋಟ್ಯಾನ್, ನಾರಾಯಣ ಪಿ.ಎಂ., ಸುಧೀಂದ್ರ ಮೊದಲಾದವರಿದ್ದರು.
ವಿನ್ಸೆಂಟ್ ಡಿ’ಕೋಸ್ತಾ ಹಾಗೂ ಧೀರೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *