ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 31ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಇಲ್ಲಿನ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ 7ನೇ ವರ್ಷದ ಉಚಿತ ಅದ್ದೂರಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 10 ಜೋಡಿ ವಧು ವರರು ಕೃಷ್ಣಭಟ್ ಪೌರೋಹಿತ್ಯದಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟರು.

ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ಹೊಸ ಅವಿಷ್ಕಾರಗಳ ಜೊತೆಗೆ ಮನಸ್ಸುಗಳನ್ನು ಕೂಡಾ ಜೋಡಿಸಿಕೊಳ್ಳಬೇಕು. ಸರಳ ವಿವಾಹಕ್ಕೆ ಒತ್ತು ನೀಡಿ ಸ್ವಾವaಲಂಬನೆ ಬದುಕಿಗೆ ಸರ್ಕಾರದ ಪ್ರೋತ್ಸಾಹವೂ ಇದೆ ಎಂದು ಅವರು ಹೇಳಿದರು.
ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮುಂಬೈ ಉದ್ಯಮಿ ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ, ಪ್ರಮುಖರಾದ ಮಂಜುನಾಥ್ ಬನ್ನೂರು, ಸುರೇಶ್ ಎಯ್ಯಾಡಿ ಮುಂಬಯಿ, ಹರೀಶ್ ಕುಮಾರ್ ಪೂಜಾರಿ, ಧೀರಜ್ ಶೆಟ್ಟಿ ಮುಂಬೈ , ಹರೀಶ್ ಪೂಜಾರಿ ಸಿದ್ದಕಟ್ಟೆ ,ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ್, ಪಿಲಾತಬೆಟ್ಟು ಸಹಕಾರಿ ಸೊಸೈಟಿ ಅಧ್ಯಕ್ಷ ಸುಂದರ ನಾಯ್ಕ್ , ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೆಟ್ಟಿ ,ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಬೆಳ್ತಂಗಡಿ ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು, ಬಂಟ್ವಾಳ ತಾ.ಪಂ.ಸದಸ್ಯರಾದ ರಮೇಶ್ ಕುಡ್ಮೇರ್, ವಿನಯ ನಾಯಕ್, ಬಿಜೆಪಿ ಮುಖಂಡ ಜಿ.ಆನಂದ, ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ನಿತ್ಯಾನಂದ ನಾವರ, ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ , ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ, ಸಾಮಾಜಿಕ ಕಾರ್ಯಕರ್ತ ಜೇಸೀ ರವಿ ಕಕ್ಯಪದವು ಮತ್ತಿತರರು ಶುಭ ಹಾರೈಸಿದರು.
ಸಂಘದ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕ ಮಾತನಾಡಿ, ಶಾದಿ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ರೂ 50 ಸಾವಿರ ಮೊತ್ತದ ಅನುದಾನ ನೀಡುತ್ತಿದ್ದು, ಕೇಂದ್ರ ಸರ್ಕಾರ ಕೂಡಾ ಉಚಿತ ಸಾಮೂಹಿಕ ವಿವಾಹದ ಜೋಡಿಗೆ ತಲಾ ರೂ 50 ಸಾವಿರ ಅನುದಾನ ನೀಡಬೇಕು ಎಂದರು. ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮಾಜಿ ಅಧ್ಯಕ್ಷÀ ಮಾಧವ ಬಂಗೇರ, ರಾಜೇಶ್ ಪುಳಿಮಜಲು, ರತ್ನಾಕರ ಪಿ.ಯಂ., ರಫೀಕ್ ಮತ್ತಿತರರು ಇದ್ದರು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಅವರು ಸ್ವಾಗತಿಸಿ, ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಮತ್ತು ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ದಿಬ್ಬಣ ಮೆರವಣಿಗೆ:
ಆರಂಭದಲ್ಲಿ ಇಲ್ಲಿನ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯ ಬಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಮತ್ತು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ದಿಬ್ಬಣ ಮೆರವಣಿಗೆಗೆ ಚಾಲನೆ ನೀಡಿದರು.
ಸನ್ಮಾನ:
ಇದೇ ವೇಳೆ ದೇವೇಂದ್ರ ಹೆಗ್ಡೆ ,ಕೊಕ್ರಾಡಿ (ಉದ್ಯಮ ), ಪಟ್ಲ ಸತೀಶ್ ಶೆಟ್ಟಿ (ಯಕ್ಷಗಾನ ), ಸದಾಶಿವ ಶಾಂತಿ(ಧಾರ್ಮಿಕ ), ಸ್ವರ್ಣಲತಾ ಹೆಗ್ಡೆ (ಸಮಾಜ ಸೇವೆ), ಮೈಲಾರಿ ತಿಪಟೂರು(ಸಮಾಜಸೇವೆ) ಇವರಿಗೆ ‘ಸ್ವಸ್ತಿಸಿರಿ ಪ್ರಶಸ್ತಿ’ ಹಾಗೂ
ಗೋಪಾಲ ಬಂಗೇರ ಮಧ್ವ(ಕಲೆ), ವೆಂಕಟೇಶ ಶೆಟ್ಟಿ ಮೂರ್ಜೆ(ಯಕ್ಷಗಾನ) ವೆಂಕಪ್ಪ ನಲಿಕೆ ಕುಂಟಾಲ್ಪಲ್ಕೆ(ಜಾನಪದ), ರಮೇಶ್ ಮಾಸ್ಟರ್ ಪುಂಜಾಲಕಟ್ಟೆ(ಶಿಕ್ಷಣ ), ಸಿಲ್ವೆಸ್ಟರ್ ಪಿಂಟೊ ನಯನಾಡು( ಉದ್ಯಮ ) ಇವರಿಗೆ ‘ಸ್ವಸ್ತಿಕ್ ಸಂಭ್ರಮ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಬಡಗುಂಡಿ ಸೂರ್ಯ ಫ್ರೆಂಡ್ಸ್ ಸಂಘಟನೆ ಮತ್ತು ಪ್ರಗತಿಪರ ಕೃಷಿಕ ರವೀಂದ್ರ ಪೂಜಾರಿ ಮಾಣಿಂಜ ಇವರನ್ನು ಗೌರವಿಸಲಾಯಿತು.
