ಡಾಕಾ: ಟಿ20 ವಿಶ್ವಕಪ್ ನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.  ಇಗ್ಲೆಂಡ್ ನಾಯಕ ಇಯನ್ ಮೋರ್ಗನ್ ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿದ್ದು ಟೀಂ ಇಂಡಿಯಾದ ಮೊದಲೆರೆಡು ವಿಕೆಟ್ ಪತನವಾದಾಗ ಸರಿಯೆಂದೇ ನಂಬಲಾಯಿತು.  ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ(5) ಮತ್ತು ಶಿಖರ್ ಧವನ್(14) ತಮ್ಮ ಎಂದಿನ ಬೇಜವಾಬ್ದಾರಿ ಆಟವನ್ನು ಮುಂದುವರಿಸಿ ಬಹುಬೇಗನೇ ಔಟ್ ಆದರು. ಯುವರಾಜ್ ಸಿಂಗ್(1) ಕೂಡಾ ಒಂದಂಕಿಯನ್ನು ದಾಟುವ ಮನಸ್ಸು ಮಾಡಲಿಲ್ಲ. ಆದರೆ ಭಾರತದ ಭವಿಷ್ಯದ ಕಪ್ತಾನ ಎಂದೇ ಬಿಂಬಿತನಾಗಿರುವ ವಿರಾಟ್ ಕೊಹ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸಿ 74 ರನ್ ಬಾರಿಸಿ ನಾಟೌಟಾಗಿ ಉಳಿದರು. ಈತನಿಗೆ ಮತ್ತೊಂದು ಕಡೆಯಿಂದ ಸುರೇಶ್ ರೈನಾ ಉತ್ತಮ ಜೊತೆಗಾರಿಕೆ ನೀಡಿದರು. ರೈನಾ ಸಿಡಿಸಿದ 54 ರನ್ ಮತ್ತು ಕೊಹ್ಲಿ74 ರನ್ ಗಳ ಸಹಾಯದಿಂದ ಟೀಂ ಇಂಡಿಯಾ 20 ಓವರ್ ಗಳಲ್ಲಿ 178 ರನ್ ಪೇರಿಸಿತು.
ನಂತರ ಆಡಲಿಳದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಲಂಬ್ ಮತ್ತು ಹೇಲ್ಸ್ ಉತ್ತಮ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಮೂಲಕ ಜಯದ ನಿರೀಕ್ಷೆ ಮೂಡಿಸಿದರು. ಇಂಗ್ಲೆಂಡ್ ನ ಅಗ್ರಪಂಕ್ತಿಯ 5 ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಅಂತಿಮವಾಗಿ ಇಂಗ್ಲೆಂಡ್ ಇಪ್ಪತ್ತು ಓವರ್ ಗಳಲ್ಲಿ 158 ರನ್ ಗಳಿಸಲಷ್ಟೇ ಶಕ್ತವಾಯಿತು.

kohli

By suddi9

Leave a Reply

Your email address will not be published. Required fields are marked *