ಬಂಟ್ವಾಳ:ದೈವಸ್ಥಾನ ಮತ್ತಿತರ ಧಾರ್ಮಿಕ ಕೇಂದ್ರಗಳಿಂದ ಮನುಷ್ಯನ ಅಂತಃಕರಣ ಶುದ್ಧಿಗೆ ಪೂರಕ ವಾತಾವರಣ ಉಂಟಾಗಿ ಶಾಂತಿ ಮತ್ತು ನೆಮ್ಮದಿ ಬದುಕು ಸಾಧ್ಯವಾಗುತ್ತದೆ ಎಂದು ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕನಪಾಡಿತ್ತಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
5btl-kanapady
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ನಿರ್ಮಾಣ್ ಕಂಟ್ರಾಕ್ಟರ್ ಎಂಜಿನಿಯರಿಂಗ್ ಸಂಸ್ಥೆ ಆಡಳಿತ ನಿರ್ದೇಶಕ ಉದಯ ಹೆಗ್ಡೆ, ಕಲ್ಲಡ್ಕ-ನೆಟ್ಲ ಶ್ರೀ ನಿಟಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಅಶೋಕ್ ಕುಮಾರ್ ಬರಿಮಾರ್, ಮಂಗಳೂರು ಕೆಪಿಟಿ ಪ್ರಿನ್ಸಿಪಾಲ್ ಕರುಣಾಕರ ರೈ ಮಿಜಾರುಗುತ್ತು, ಮೇಯರ್ ಮಹಾಬಲ ಮಾರ್ಲ, ಕಾರ್ಪೋರೇಟರ್ ಭಾಸ್ಕರ್ ಮೊಯಿಲಿ, ಬೊಂಡಾಲ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಡಾ.ಸತ್ಯಶಂಕರ ಶೆಟ್ಟಿ, ಟಿ.ಕೃಷ್ಣ ಮಾರ್ಲ, ಜ್ಯೋತೀಂದ್ರ ಪ್ರಸಾದ್ ಮುಂಡಾಜೆಗುತ್ತು, ಜನಾರ್ಧನ ಶೆಟ್ಟಿ ಮೊಡಂಕಾಪು ಮತ್ತಿತರರು ಇದ್ದರು.
ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ರಾಜಶೇಖರ್ ರೈ ಕಳ್ಳಿಗೆಗುತ್ತು ಸ್ವಾಗತಿಸಿ, ನವೀನ್ ಚಂದ್ರ ಶೆಟ್ಟಿ ವಂದಿಸಿದರು. ರಾಜಾರಾಮ ಶೆಟ್ಟಿ ಪೇರ್ಲಂಬೆಲುಗುತ್ತು ಪ್ರಾಸ್ತಾವಿಕ ಮಾತನಾಡಿದರು. ಸಂತೋಷ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *