ಸುದ್ದಿ9 ವಾಮಂಜೂರು: ವಾಮಂಜೂರು ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್ನ ಸಹಯೋಗದಿಂದ ಮಹಿಳೆಯರಿಗೆ ಇರುವ ಸಮಸ್ಯೆಗಳ ಕುರಿತು ಕಾರ್ಯಕ್ರಮವು ಮಾರ್ಚ್ 2 ಸೋಮವಾರ ಸಂತ ರೈಮಂಡ್ಸ್ ಡಿಗ್ರಿ ಕಾಲೇಜ್ ವಾಮಂಜೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಅತಿಥಿಗಳಾಗಿ ಗೈನಕಾಲಜಿಸ್ಟ್ ಒಬ್ಸ್ಟೆಟ್ರಿಶಿಯನ್ನ ಡಾ| ಅರುಣಾ ಕಾಮತ್ ಭಾಗವಹಿಸಿ ಯವತಿಯರಿಗೆ ಬರುವ ಸಮಸ್ಯೆಗಳ ಹುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಸಿಸ್ಟರ್ ಡಾ| ಸೆಲಿನ್ ವಾಸ್ ಮತ್ತು ಕಾಲೇಜಿನ ಶಿಕ್ಷಕಿಯರಾದ ಕುಮಾರಿ ರೀನಾ ಬ್ಲೋಸಂ, ಕುಮಾರಿ ಜಕೀರ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಸಿಸ್ಟರ್ ಟ್ರೀಸಾ ನಿರೂಪಣೆ ಗೈದು ನಿರ್ವಹಿಸಿದರು, ಕುಮಾರಿ ರೈನಾ ಧನ್ಯವಾದವಿತ್ತರು.







