ವಾಟ್ಸಪ್ ನಲ್ಲಿ ಮನಸಿಗೆ ಬಂದಂತೆ ಚಿತ್ರ, ವಿಡಿಯೋ ಶೇರ್ ಮಾಡುವವರಿಗೆ ಒಂದು ಎಚ್ಚರಿಕೆ. ನೀವೇನಾದರೂ ಅಪ್ಪಿತಪ್ಪಿ ಅಶ್ಲೀಲ ಹಾಗೂ ಸಮಾಜಘಾತುಕ ಕೃತ್ಯಗಳ ವಿಡಿಯೋವನ್ನು ಶೇರ್ ಮಾಡುತ್ತೀರೋ ನಿಮಗೆ ಜೈಲೂಟ ಗ್ಯಾರಂಟಿ.!

ಹೌದು. ವಾಟ್ಸಪ್ ನಲ್ಲಿ ಹರಿದಾಡುತ್ತಿರುವ 2 ಅತ್ಯಾಚಾರ ಪ್ರಕರಣಗಳ ವಿಡಿಯೋಗಳು ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಇಂತಹ ಪ್ರಕರಣದಿಂದ ಸಮಾಜದಲ್ಲಿ ಮತ್ತಷ್ಟು ಅಹಿತಕರ ಘಟನೆಗಳು ನಡೆಯಲು ಕಾರಣವಾಗುತ್ತವೆ ಹಾಗಾಗಿ ತಕ್ಷಣ ವಾಟ್ಸ್ ಆಪ್ ನಲ್ಲಿ ಈ ವೀಡಿಯೋವನ್ನು ಹರಿಬಿಟ್ಟವರನ್ನು ಬಂಧಿಸಿ ಸಿಬಿಐ ತನಿಖೆ ನಡೆಸಿ ಎಂದು ಆದೇಶಿಸಿದೆ.
ಐವರು ಯುವಕರು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗುತ್ತಿರುವ ವೀಡಿಯೋ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ವಿಷಯಕ್ಕೆ ಸಂಬಂಧಿಸಿ ನ್ಯಾ. ಮದನ್ ಬಿ.ಲೋಕುರ್ ಮತ್ತು ನ್ಯಾ.ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡುವುದರ ಜತೆಗೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ದೆಹಲಿ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರಕ್ಕೆ ನೋಟಿಸ್ ನೀಡಿ ತಕ್ಷಣ ಈ ಕುರಿತು ವರದಿ ನೀಡುವಂತೆ ಸೂಚಿಸಿದೆ .
