ಸುದ್ದಿ 9 ಬಂಟ್ವಾಳ: ಕಳೆದ 15 ದಿನಗಳ ಹಿಂದೆ ಬಿ.ಸಿ.ರೋಡಿನಲ್ಲಿ ನಡೆದ ಹಿಂದೂ ಸಂಗಮದಲ್ಲಿ ಪ್ರಚೋಧನಾಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ ಪೋಲಿಸರು ವಿನಾಕಾರಣ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಹಿಂದು ಸಂಘಟನೆಗಳ ಸಹಸ್ರಾರು ಕಾರ್ಯಕರ್ತರು ಮಂಗಳವಾರ ಬಿ.ಸಿ.ರೋಡು ನಗರ ಠಾಣೆಗೆ ದಿಡೀರ್ ಮುತ್ತಿಗೆ ಹಾಕಿದರು. ಠಾಣೆಯ ಒಳಗಡೆ ಪ್ರವೇಶಿಸಲು ಯತ್ನಿಸಿದ ಕಾರ್ಯಕರ್ತರನ್ನು ಪೋಲೀಸರು ಗೇಟ್ ಹಾಕಿ ತಡೆದಾಗ ಕಾರ್ಯಕರ್ತರು ಠಾಣೆಯ ಗೇಟ್ ಬಳಿ ನೆಲದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಪೋಲಿಸರ ವಿರುದ್ಧ ದಿಕ್ಕಾರ ಕೂಗಿದರಲ್ಲದೆ ಪ್ರಭಾಕರ ಭಟ್ ಮೇಲೆ ಹಾಕಿರುವ ಪ್ರಕರಣದ ಹಿಂತೆಗೆತ ಸಹಿತ ಹಿಂದು ಕಾರ್ಯಕರ್ತರ ಮೇಲೆ ರಾಜಕೀಯ ಒತ್ತಡಕ್ಕೆ ಮಣಿದು ದೌರ್ಜನ್ಯ ನಡೆಸುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಕೆಲಹೊತ್ತು ಆತಂಕದ ವಾತಾವರಣ ನಿಮರ್ಾಣಗೊಂಡಿದ್ದು ಸ್ಥಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ನಡೆಸಲಾಯಿತು.


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ನಾಯಕ ಜಗದೀಶ ಶೇಣವ, ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೇಸ್ ಸಾಮರಸ್ಯ ಸಮಾವೇಷದಲ್ಲಿ ಗಲಾಭೆ ಸೃಷ್ಠಿಸಿದವರನ್ನು ಬಿಟ್ಟು ಅಮಾಯಕ ಹಿಂದುಗಳ ಮೇಲೆ ವಿನಾಕಾರಣ ಕೇಸು ದಾಖಲಿಸಲಾಗಿದೆ. ಈಗಲೂ ಹಿಂದುಗಳ ಮನೆಗೆ ತೆರಳಿ ಪೋಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಕಲ್ಲಡ್ಕದ ಗಲಭೆಗೆ ಕಾರಣವಾದ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕಾಂಗ್ರೇಸ್ ಯುವ ಮೋಚರ್ಾ ಅಧ್ಯಕ್ಷ ಪ್ರಶಾಂತ್ ಕುಲಾಲ್ ಸಹಿತ 10 ಮಂದಿಯನ್ನು ಬಂದಿಸುವಂತೆ ಬಂಟ್ವಾಳ ನ್ಯಾಯಾಲಯ ಆದೇಶ ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣವನ್ನು ತಿರುಚುವ ಉದ್ದೇಶದಿಂದ ಇದೀಗ ಯಾರೋ ದೂರು ನೀಡಿದ್ದಾರೆಂದು 15 ದಿನಗಳ ಹಿಂದೆ ನಡೆದ ಹಿಂದು ಸಂಗಮವನ್ನು ನೆಪವೊಡ್ಡಿ ಡಾ.ಪ್ರಭಾಕರ ಭಟ್ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೋಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಈ ರೀತಿ ಕಾನೂನು ಮೀರಿ ವತರ್ಿಸಿದರೆ ನಾವು ಸುಮ್ಮನಿರಲ್ಲ. ಕಾನೂನು ನಮಗೂ ಗೊತ್ತಿದೆ. ಆ ಮೂಲಕ ಇಡೀ ಹಿಂದು ಸಮಾಜವೇ ನಿಮಗೆ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಬಳಿಕ ಎಡಿಶನಲ್ ಎಸ್ಪಿ ಟಿ.ಪಿ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಅವರು ಎಲ್ಲಾ ವಿದ್ಯಮಾನಗಳ ಬಗ್ಗೆ ಪರಶೀಲಿಸಲಾಗುವುದು. ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.


