ಮಂಗಳೂರು: ಅಗ್ರಿಗೋಲ್ಡ್ ಕಂಪೆನಿ ಗ್ರಾಹಕರಿಗೆ ಹಣ ಕೊಡದೆ ಸತಾಯಿಸುತ್ತಿರುವ ಬೆನ್ನಲ್ಲೇ ಇದೀಗ ತಲಪಾಡಿ ಸಮೀಪದ ಜಾಗವನ್ನು ಕಂಪೆನಿ ಮಾರಲು ಹುನ್ನಾರ ನಡೆಸಿದೆ ಎಂದು ಆರೋಪಿಸಿ ಇಂದು ಗ್ರಾಹಕರು ಹಾಗೂ ಪ್ರತಿನಿಧಿಗಳು ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

gold
ತಲಪಾಡಿಯಲ್ಲಿರುವ ಜಾಗವನ್ನು ಕಂಪೆನಿ ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಮಾರಲು ಹುನ್ನಾರ ನಡೆಸುತ್ತಿರುವುದು ಅಗ್ರಿಗೋಲ್ಡ್ ಪ್ರತಿನಿಧಿಗಳಿಗೆ ಮಾಹಿತಿ ದೊರೆತಿತ್ತು. ಇದರಿಂದ ಕೋಪಗೊಂಡ ಗ್ರಾಹಕರು ಹಾಗೂ ಪ್ರತಿನಿಧಿಗಳು ತಲಪಾಡಿಯ ಅಗ್ರಿಗೋಲ್ಡ್ ಆಸ್ತಿ ಮುಂದೆ ಪ್ರತಿಭಟನೆ ನಡೆಸಿ ಜಾಗವನ್ನು ಮಾರದಂತೆ ಜಿಲ್ಲಾಧಿಕಾರಿ, ಜಿಲ್ಲ ನೋಂದಣಾಧಿಕಾರಿ, ಹಾಗೂ ಕೋಟೆಕಾರ್ ಪಂಚಾಯತ್‍ಗೆ ಮನವಿ ಮಾಡಲಾಯಿತು. ಮಂಗಳೂರಿನಲ್ಲೂ ಅಗ್ರಗೋಲ್ಡ್ ಕಂಪೆನಿಗೆ ಸಾಕಷ್ಟು ಆಸ್ತಿ ಇದ್ದು, ಇದನ್ನು ಮಾರಿ ಗ್ರಾಹಕರಿಗೆ ಹಣ ಕೊಡಬೇಕೆಂಬ ಒತ್ತಾಯವೂ ಪ್ರತಿಭಟನೆಯಲ್ಲಿ ಕೇಳಿಬಂದಿದೆ.

By Suddi9

Leave a Reply

Your email address will not be published. Required fields are marked *