ಮೂಡುಬಿದಿರೆ : ಇಲ್ಲಿನ ಗೌರಿಕೆರೆ ಲಿಟ್ಲ್ ಫ್ಲವರ್ ಪ್ರೀಸ್ಕೂಲಿನಲ್ಲಿ ರ “ಗ್ರೀನ್ ಡೇ” (ಹಸಿರು ದಿನ)ಯನ್ನು ಭಾನುವಾರ ಆಚರಿಸಲಾಯಿತು.

ಮೂಡುಬಿದಿರೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಕಿಶೋರ್ ಕುಮಾರ್ ಅವರು ದೀಪ ಬೆಳಗಿಸಿ, ಶಾಲಾ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿ ಪರಂಪರೆ, ಪ್ರಕೃತಿ-ಪರಿಸರ ಸಂಸ್ಕೃತಿ ಕೂಡಿರುವ ಹಸುರುಮಯ ಜಾಗ ನಮ್ಮದು. ಇಂದು ಮರಗಿಡಗಳಿಂದ ತುಂಬಿರುವ ಈ ಪರಿಸರದಿಂದ ಮುಂದಿನ ದಿನಗಳಲ್ಲಿ ಅವಶ್ಯವಾದ ಮರಗಳುನ್ನು ಕಡಿಯುವುದರಿಂದ ಕಡಿಮೆಯಾಗಬಹುದು ಆದ್ದರಿಂದ ಹೆತ್ತವರು ಮಕ್ಕಳಿಗೆ ಎಳವೆಯಲ್ಲಿಯೇ ಪರಿಸರ ಮತ್ತು ಮರಗಿಡಗಳ ಮಹತ್ವವನ್ನು ತಿಳಿ ಹೇಳಬೇಕೆಂದರು.
23 mood green day 2

23 mood green day

ಆಳ್ವಾಸ್ ಆಯುವರ್ೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಬಿ.ವಿನಯಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೆತ್ತವರು ಮಕ್ಕಳ ಜತೆ ಅಂತರವನ್ನು ಇಟ್ಟುಕೊಳ್ಳದೆ ಮಕ್ಕಳಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಮಕ್ಕಳಿಗೆ ಅವರದ್ದೇ ಆದ ಕೆಲವು ಆಟೋಟ, ಚಟುವಟಿಕೆಗಳಿವೆ ಅದನ್ನು ಗುರುತಿಸಿ ಪ್ರೋತ್ಸಾಹಿಸಿ ಮಕ್ಕಳ ಜತೆ ಮಕ್ಕಳಾಗಿ ಎಂದು ಸಲಹೆ ನೀಡಿದರು.

ಶಾಲಾ ಮುಖ್ಯಸ್ಥೆ ಲಕ್ಷ್ಮೀ ಗುರುಪ್ರಸಾದ್, ಗುರುಪ್ರಸಾದ್, ಸಂಯೋಜಕಿ ಶೋಭಾ ಉಪಸ್ಥಿತರಿದ್ದರು.
ಶಿಕ್ಷಕಿ ಗುಲಾಬಿ ಸ್ವಾಗತಿಸಿದರು. ಪುಟಾಣಿ ತ್ವಿಶಾ ಶೆಟ್ಟಿ ಮರಗಳ ಮಹತ್ವದ ಬಗ್ಗೆ ವಿವರಿಸಿದರು. ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು. ವಸಂತಿ ವಂದಿಸಿದರು. ಪುಟಾಣಿಗಳು ಮತ್ತು ಅವರ ಹೆತ್ತವರು ಗ್ರೀನ್ ಡೇ ಆಚರಣೆಯ ಅಂಗವಾಗಿ ಹಸುರು ಬಣ್ಣದ ಬಟ್ಟೆಗಳಲ್ಲಿ ಕಂಗೊಳಿಸಿದರು

By suddi9

Leave a Reply

Your email address will not be published. Required fields are marked *