ಸುದ್ದಿ 9 ಕೈಕಂಬ; ಕೊಂಪದವು ಅಜರ್ುನಕೋಡಿ ಇಲ್ಲಿಯ ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ನಲ್ಲಿ ದಶಮಾನೋತ್ಸವದ ಸಂಭ್ರಮ

ಮಾಚರ್್ 29ರ ಶನಿವಾರ ಸಂಜೆ 6ರಿಂದ ಕಲಾ ಸ್ಪರ್ಶ ಡ್ಯಾನ್ಸ್ ಅಕಾಡೆಮಿ ಗಂಜಿಮಠ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಹಾಗೂ ಶರಣ್ ಕೈಕಂಬ ಇವರಿಂದ ಮಿಮಿಕ್ರಿ ಕಾರ್ಯಕ್ರಮ. ರಾತ್ರಿ 8.30 ಕ್ಕೆ ಸಭಾ ಕಾರ್ಯಕ್ರಮದಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖಾರನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಪ್ರಧಾನ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ತ್ರಿನೇತ್ರ ಫ್ರೆಡ್ಸ್ ಕ್ಲಭ್ನ ಗೌರವ ಸಲಹೆಗಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡುಪೆರಾರ ಚಚರ್್ ಧರ್ಮಗುರು ರೆ.ಡಾ. ಪಿಯುಸ್ ಫಿದೆಲಿಸ್ ಪಿಂಟೋ, ನಿಡ್ಡೋಡಿ ಜ್ಙಾನನರತ್ನ ಎಜುಕೇಶನ್ &ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ್ ದೇವಸ್ಯ , ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ಧನಗೌಡ ಮುಚ್ಚೂರು ,ಮಾಜಿ ಜಿಲ್ಲಾ ಪಂ ಸದಸ್ಯ ಕೃಷ್ಣ ಅಮೀನ್ , ಮುಚ್ಚೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಗಣೇಶ್ ಕೋಟ್ಯಾನ್ ಕೈಕಂಬ,ಕೊಂಪದವು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸಾಂತ್ ಐತಾಳ, ತಾಲೂಕು ಪಂಚಾಯತಿ ಸದಸ್ಯ ಪ್ರಕಾಶ್ ಎಡಪದವು ಭಾಗವಹಿಸಲಿದ್ದಾರೆ. 10ರಿಂದ ನಮ್ಮ ಕಲಾವಿದೆರ್ ಬೆದ್ರ ಇವರಿಂದ ತುಳು ಹಾಸ್ಯ ನಾಟಕ ” ಆತೇ ಪನೋಡಾತೆ ” ಮರುದಿನ ಮಾಚರ್್ 30 ರಂದು ಭಾನುವಾರ ಸಂಜೆ 6.30ರಿಂದ ಸತ್ಯನಾರಾಯಣ ಪೂಜೆ.ನಂತರ ಬಪ್ಪನಾಡು ಶ್ರೀ ದುಗರ್ಾಪರಮೇರ್ಶವರೀ ಯಕ್ಷಗಾನ ಮಂಡಳಿ ಅವರಿಂದ ರುದ್ರ ಭೈರವಿ ಎಂಬ ತುಳು ಯಕ್ಷಗಾನ ನಡೆಯಲಿದೆ. ಎಂದು ಫ್ರೆಡ್ಸ್ ಕ್ಲಭ್ನ ಪ್ರಕಟನೆ ತಿಳಿಸಿದೆ.

