ಬಂಟ್ವಾಳ; ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ದ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದ.ಕ. ಮಂಗಳೂರು ಇವರ ಸಹಯೋಗದೊಂದಿಗೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯಲಿರುವ ಮೂರು ದಿನಗಳ
“ಪುಸ್ತಕ ಮೇಳ-ಸಾಹಿತ್ಯ ಸಂವಾದ” ಕಾರ್ಯಕ್ರಮಕ್ಕೆ ಸೋಮವಾರ ಬೆಳಿಗ್ಗೆ ಸಂಭ್ರಮದ ಚಾಲನೆ ದೊರೆತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ..ರಮಾನಾಥ ರೈ ಯವರು ಸ್ವತಃ ಪುಸ್ತಕವನ್ನು ಖರೀದಿಸುವ ಮೂಲಕ ಪುಸ್ತಕ ಮೇಳವನ್ನು ವಿನೂತನವಾಗಿ ಉದ್ಘಾಟಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪತ್ರಕರ್ತರು ತಮ್ಮ ವೃತ್ತಿಯನ್ನು ವರದಿಗಾರಿಕೆಗಷ್ಟೇ ಸೀಮಿತಗೊಳಿಸದೆ, ಕ್ರಿಯಾಶೀಲರಾಗಿದ್ದುಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದರ ಜೊತೆಯಲ್ಲಿ ವಿಶಾಲಮನೋಭಾವ ಬೆಳೆಸಿಕೊಳ್ಳಬೇಕು, ಆಗ ಅವರ ವರದಿಗಾರಿಕೆಗೂ ಹೆಚ್ಚು ಶಕ್ತಿ ಬರುವುದಲ್ಲದೆ, ವಸ್ತುನಿಷ್ಠವಾಗಿ ಮೂಡಿಬರುತ್ತದೆ ಎಂದರು. ಈ ನಿಟ್ಟಿನಲ್ಲಿ ಬಂಟ್ವಾಳದ ಪತ್ರಕರ್ತರು ಹೆಚ್ಚು ಕ್ರಿಯಾಶೀಲ ಹಾಗೂ ಸಮಾಜಮುಖಿ ಚಿಂತನೆಯುಳ್ಳವರು ಎಂಬುದನ್ನು ತಾನು ಗಮನಿಸಿದ್ದೇನೆ ಎಂದು ಶ್ಲಾಘಿಸಿದರು.
pusthaka mela

1

2

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರೇ ಪುಸ್ತಕ ಮೇಳವನ್ನು ಆಯೋಜಿಸುವ ಮೂಲಕ ಸಾರಸ್ವತ ಲೋಕದ ಅಭಿವೃದ್ದಿಗೆ ಕೊಡುಗೆ ನೀಡಿರುವುದು ಅಭಿನಂದನೀಯ, ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಮತ್ತು ಇಂತಹಾ ಕಾರ್ಯಕ್ಕೆ ಸರ್ಕಾರ ಅಗತ್ಯ ನೆರವು ನೀಡಬೇಕೆಂದು ಆಶಯವ್ಯಕ್ತಪಡಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಯಶವಂತ ದೇರಾಜೆ , ಲೇಖಕಿ ಉಪನ್ಯಾಸಕಿ ನಾಗವೇಣಿ ಮಂಚಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಸ್ವಾಗತಿಸಿದರು. ಕಾರ್ಯದರ್ಶಿ  ರತ್ನದೇವ್ ಪೂಂಜಾಲಕಟ್ಟೆ ವಂದಿಸಿದರು. ಸದಸ್ಯ ಉದಯಶಂಕರ್ ನೀರ್ಪಾಜೆ ನಿರೂಪಿಸಿದರು.

ಮಧ್ಯಾಹ್ನದ ಬಳಿಕ ಸಾಹಿತ್ಯ ಬದುಕಿಗೆಷ್ಟು ಅನಿವಾರ್ಯ ಎಂಬ ಕುರಿತು ಪತ್ರಕರ್ತ ಗೋಪಾಲ ಅಂಚನ್ ವಿಶೇಷ ಉಪನ್ಯಾಸ ನೀಡಿದರು.

By Suddi9

Leave a Reply

Your email address will not be published. Required fields are marked *