ಬಂಟ್ವಾಳ, ಫೆ. 13: ಆಧುನಿಕ ವ್ಯವಸ್ಥೆಯಲ್ಲಿ ಒಂದು ದೇವಾಲಯ ನಿರ್ಮಾಣಕ್ಕೆ ಆರ್ಥಿಕವಾಗಿ ಕಷ್ಟವಾಗುವುದಿಲ್ಲ. ಆದರೆ ಮುಂದಕ್ಕೆ ಅದನ್ನು ನಡೆಸಿಕೊಂಡು ಹೋಗುವಲ್ಲಿ ವ್ಯವಸ್ಥೆಯ ಸಮಸ್ಯೆ ಎದುರಾಗುತ್ತದೆ ಎಂದು ಮಾಣಿಲ ಶ್ರೀ ಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮಿ ಹೇಳಿದರು.

ಅವರು ಫೆ. 13ರಂದು ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ನಿ ಕುಂಭ ಸ್ಥಾಪನೆ, ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ನಮ್ಮ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ, ಇಂದು ಪರಿಸ್ಥಿತಿ ಹೇಗಿದೆ ಎಂದರೆ, ಮಕ್ಕಳು ಮನೆಯಲ್ಲಿ ಟಿ. ವಿ, ಮೊಬೈಲ್ನಲ್ಲಿ ಆಡುತ್ತಾ ಇರುತ್ತಾರೆ. ಹಿರಿಯರು ದೇವಸ್ಥಾನಕ್ಕೆ ಹೋಗಿ ಮಕ್ಕಳಿಗೆ ಒಳ್ಳೆಯ ಬುದ್ಧಿ ಕೊಡು, ಅವರನ್ನು ಸುಸಂಸ್ಕೃತರನ್ನಾಗಿ ಮಾಡು ಎಂದು ದೇವರಲ್ಲಿ ಬೇಡುತ್ತಿರುವ ಸ್ಥಿತಿ ಇದೆ ಎಂದರು.
1302bteph10

13btl-eramale

ಇಲ್ಲಿನ ದೇವಾಲಯವನ್ನು ಧ್ಯಾನಮಂದಿರವಾಗಿ ರೂಪಿಸಿ. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು, ಖರ್ಚು ವೆಚ್ಚವು ಕಡಿಮೆ. ತಿಂಗಳಿಗೆ ಒಮ್ಮೆ ಇಲ್ಲಿ ನಡೆಯುವ ಪೂಜೆಯನ್ನು ಸುಲಲಿತವಾಗಿ ನಡೆಸಬಹುದು ಎಂದರು.
ಇದೊಂದು ದೇವಿ ಕ್ಷೇತ್ರವಾಗಿ ಅತ್ಯಂತ ಕಾರಣೀಕ ಶಕ್ತಿ ಇಲ್ಲಿ ಗೋಚರಕ್ಕೆ ಬರುತ್ತಿದೆ. ಅದನ್ನು ನಿಷ್ಠೆಯಿಂದ ನಿರ್ವಹಿಸಿ. ಅತ್ಯಂತ ಎತ್ತರದ ಪ್ರದೇಶ ಆಗಿರುವುದರಿಂದ ಪ್ರಾಕೃತಿಕ ಸೌಂಧರ್ಯವನ್ನು ಹೊಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಮಾಜಿಕ ಸೇವಾಕರ್ತ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ವಹಿಸಿ ಶುಭ ಹಾರೈಸಿದರು.ಉದ್ಯಮಿ ದಾನಿಗಳಾದ ರಘು ಸಪಲ್ಯ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ದೇವರ ಕೆಲಸಕ್ಕೆ ದುಡ್ಡು ಬರುತ್ತದೆ. ನಾವು ದುಡಿಯಬೇಕು. ನಮ್ಮ ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ನಮ್ಮ ನಾಡಭಾಷೆಯ ಅಭಿಮಾನ, ಚಿಂತನೆಗಳನ್ನು ಬಿತ್ತುವುದು ಅವಶ್ಯ ಎಂದರು.

ನಮ್ಮ ಭಾಷೆಯಲ್ಲಿ ಹಿರಿಯರಿಂದ ಕಿರಿಯರನ್ನು ಕರೆಯುವ ಶಬ್ದ ಭಂಡಾರಗಳು ಅಪಾರವಾಗಿದೆ. ಯಾವುದೇ ಭಾಷೆ ಕಲಿಯಬಾರದು ಎಂದಲ್ಲ. ನಮ್ಮದನ್ನು ಮರೆಯಬಾರದು ಎಂಬ ಕಳಕಳಿ ನಮ್ಮಲ್ಲಿ ಬೇಕು. ಆಧುನಿಕ ವ್ಯವಸ್ಥೆಯನ್ನು , ಭಾಷೆಯನ್ನು , ವಾತಾವರಣವನ್ನು ಬರಮಾಡಿಕೊಳ್ಳುವ ಜೊತೆಗೆ ನಮ್ಮ ಮೂಲ ಸಂಸ್ಕೃತಿಯನ್ನು ಮರೆಯಬಾರದು ಎಂಬುದು ಕೂಡಾ ಅಷ್ಟೆಮುಖ್ಯ ಎಂಬ ಅಭಿಪ್ರಾಯ ನೀಡಿದರು.

ಪತ್ರಕರ್ತ ವೆಂಕಟೇಶ್ ಬಂಟ್ವಾಳ ಮಾತನಾಡಿ ಇದೊಂದು ಪ್ರಾಕೃತಿಕ ಚೆಲುವಾದ ಕ್ಷೇತ್ರ , ದೇವಿ ಕ್ಷೇತ್ರವಾಗಿ ಇಲ್ಲಿಗೆ ಕಾಲಿಟ್ಟಾಗಲೇ ಇಲ್ಲಿನ ಕಾರಣೀಕವು ಗೋಚರಕ್ಕೆ ಬರುವುದು. ಈ ಸ್ಥಳ ಸಂದರ್ಶಿಸಿ ಸಂತೋಷವಾಗಿದೆ. ಸಂಘಟಕರು ದೇವಾಲಯವನ್ನು ಉತ್ತಮವಾಗಿ ಬೆಳಗಿಸಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಬಂಟ್ವಾಳ ಪುರಸಭೆಯ ಮಾಜಿ ಸದಸ್ಯ ಪಾಂಡುರಂಗ ಪ್ರಭು ಉಪಸ್ಥಿತರಿದ್ದರು.
ಕ್ಷೇತ್ರದ ಪ್ರಮುಖರಾದ ಕೇಶವ ಶಾಂತಿ ನಾಟಿ, ಸಂಜೀವ ಸಪಲ್ಯ ಕೇದಿಗೆ, ಮೋನಪ್ಪ ಪೂಜಾರಿ ಹೊಸವೊಕ್ಲು, ಚಂದ್ರಶೇಖರ ಕೇದಿಗೆ, ನ್ಯಾಯವಾದಿ ಪ್ರಶಾಂತ ಅಂತರ,ಕೇಶವ ಪಲ್ಲತ್ತಿಲ, ತ್ರಿವೇಣಿ ಕೇದಿಗೆ, ಪ್ರೇಮನಾಥ ಶೆಟ್ಟಿ, ರವೀಂದ್ರ ಸಪಲ್ಯ, ಗಾಯತ್ರಿ ಆರ್. ಸಪಲ್ಯ, ಕಿಶೋರ್ ಶೆಟ್ಟಿ, ಭಾಸ್ಕರ ಶೆಟ್ಟಿ ಸಹಿತ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಮನೋಜ್ ಕೇದಿಗೆ ಸ್ವಾಗತಿಸಿ, ಪೂಜಾ ಕೇದಿಗೆ ವಂದಿಸಿದರು. ಪ್ರಶಾಂತ್ ಕೇದಿಗೆ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *