ಸುದ್ದಿ9 ಬಂಟ್ವಾಳ: ಶಾಸ್ತ್ರ ತೇಜಸ್ಸು ಮತ್ತು ಬ್ರಹ್ಮ ವರ್ಚಸ್ಸು ಇರುವಲ್ಲಿ ಸರಸ್ವತಿಯು ನೆಲೆಯೂರಿರುತ್ತಾಳೆ. ಅಲ್ಲಿ ಭಗವಂತನ ಅನುಗ್ರಹ ಇದ್ದೇ ಇರುತ್ತದೆ. ನಾವು ಧರ್ಮಕ್ಕೆ ಮಾತ್ರ ಹೆದರಬೇಕು. ಧರ್ಮಕ್ಕೆ ಪ್ರಮುಖವಾದ ಪ್ರಾಧಾನ್ಯತೆಯನ್ನು ಕೊಡಬೇಕು ಎಂದು ಖ್ಯಾತ ವಾಗ್ಮಿ ಹಾಗೂ ದೈವ ಪಾತ್ರಿ ದಯಾನಂದ ಕತ್ತಲ್ ಸಾರ್ ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ದಿನೋತ್ಸವವನ್ನು ಉದ್ದೇಶಿಸಿ ಮಾತನಾಡಿ, ಎಲ್ಲಿ ಪ್ರಕೃತಿಯ ಮಧ್ಯದಲ್ಲಿ ಶಿಕ್ಷಣ ದೊರೆಯುತ್ತದೆಯೋ ಅಲ್ಲಿ ಉತ್ತಮ ಆರೋಗ್ಯ ಯಶಸ್ಸು ಹಾಗೂ ಸಂಸ್ಕಾರ ಮತ್ತು ಪ್ರತಿಭೆಗಳಿಗೆ ಉತ್ತಮವಾದ ಪ್ರೋತ್ಸಾಹ ಲಭಿಸುತ್ತದೆ ಎಂದರು.
ಎಲ್ಲಿ ಹೆತ್ತ ತಾಯಿ, ಹೊತ್ತ ಭೂಮಿ, ಸಂಸ್ಕಾರ ನೀಡಿದಂತಹ ಪುಣ್ಯಭೂಮಿ, ತಿದ್ದಿ ಬುದ್ಧಿ ಹೇಳುವ ಗುರುವಿರುತ್ತಾರೋ ಅಂತಹ ವಿದ್ಯಾಲಯ ವಿದ್ಯಾದೇಗುಲವಾಗುತ್ತದೆ. ಅಲ್ಲಿ ಯಾವತ್ತೂ ಕೆಟ್ಟ ಪ್ರಭಾವಗಳಾಗುವುದಿಲ್ಲ ಎಂದರು.
DSCN0669

 

 

DSCN0365

 

 

DSCN0666
ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದ ಅವರು ಅದ್ಭುತ ವರ್ಚಸ್ಸಿನಿಂದ ನೀವು ಈಗಾಗಲೇ ಶಿಲೆಯಾಗಿದ್ದೀರಿ ನಿಮ್ಮನ್ನು ಮೂರ್ತಿ ಮಾಡುವುದು ಅಷ್ಟೇನೂ ಕಷ್ಟವಲ್ಲ, ಯಾವತ್ತೂ ನಂಬಿಕೆ, ಸತ್ಯ, ಸಂಸ್ಕಾರ, ದೈವಾರಾಧನೆ, ದೇಶಭಕ್ತಿ ವಿದ್ಯಾರ್ಥಿಗಳಲ್ಲಿ ಇರುತ್ತದೆಯೋ ಅಂತಹ ವಿದ್ಯಾರ್ಥಿಗಳಿಗೆ ಎಲ್ಲಿಯೂ ಸೋಲಿಲ್ಲ, ಎಂದಿಗೂ ಭವಿಷ್ಯದಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಿರಿ. ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಂಡು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದೆಂದು ಕಿವಿ ಮಾತು ಹೇಳಿದರು.
ತುಳುನಾಡಿನ ವೈಭವವನ್ನು ವರ್ಣಿಸುತ್ತಾ, ತುಳುಗಾದೆಗಳು ಇಂದಿನ ಪಾಠ-ಪ್ರವಚನಕ್ಕೆ ಅತ್ಯಂತ ಪೂರಕವಾಗಿದೆ. ಬದುಕಿನ ಸತ್ಯವನ್ನು ನುಡಿಕಟ್ಟಿನ ಮುಖೇನ ಹೇಳುವ, ಕೆಟ್ಟವರನ್ನು ಉತ್ತಮವರನ್ನಾಗಿಸಿ ಬದುಕುವ ಕಲೆಯನ್ನು ಕಲಿಸುವ ವಿಶಿಷ್ಟವಾದ ಜ್ಞಾನ ತುಳುನಾಡಿನಲ್ಲಿದೆ, ಎಂದಿಗೂ ನಾವು ಒಳ್ಳೆಯವರ ಅಭಿಮಾನಿಗಳಾಗಬೇಕು, ಆಗ ಒಳ್ಳೆಯತನ ತಾನಾಗಿಯೇ ಹರಿದು ಬರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಅಶೋಕ್ ಕಪ್ಪಲಗುದ್ದಿ ಗೋಕಾಕ್, ನ್ಯಾಯವಾದಿ ವಿನುತಾ ಜಯಪ್ರಕಾಶ್, ಸಂಸ್ಥೆಯ ಸಂಚಾಲಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರದೀಪ್ತ ಸಂಘದ ಮತ್ತು ಪ್ರತಾಪ ಕ್ರೀಡಾ ಸಂಘದ ವತಿಯಿಂದ ಆಯೋಜಿಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದಲ್ಲಿ ಅತ್ಯಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಈ ವರ್ಷದ ಕನ್ನಡ ಮಾಧ್ಯಮ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಾರ್ಷಿಕ ಕ್ರೀಡಾ ಸಮಗ್ರ ಪಶಸ್ತಿಯನ್ನು ಅಭಿಮನ್ಯು ತಂಡ ಹಾಗೂ ಸಾಂಸ್ಕ್ರತಿಕ ಸಮಗ್ರ ಪಶಸ್ತಿಯನ್ನು ಸೌಪರ್ಣಿಕಾ ತಂಡ ಪಡೆದುಕೊಂಡಿತು. ವರ್ಷದ ಕ್ರೀಡಾ ಚಾಂಪಿಯನ್‍ಶಿಪ್ ಸಚಿನ್ ಹಾಗೂ ವಿಜಯಶ್ರೀ ಪಡೆದುಕೊಂಡರು, ಸಾಂಸ್ಕ್ರತಿಕ ಸಂಘದ ಚಾಂಪಿಯನ್‍ವಿದ್ಯಾಶ್ರೀ ಪಡೆದುಕೊಂಡರು.
ಈ ಸಂದರ್ಭದಲ್ಲಿ ‘ಹೆಮ್ಮೆಯ ಭಾರತ’ ಎನ್ನುವ ವಿಷಯವನ್ನಾಧರಿಸಿ ವಿದ್ಯಾರ್ಥಿಗಳು ವೈವಿದ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಇದರಲ್ಲಿ ಬೇರೆ ಬೇರೆ ರಾಜ್ಯದ ಸಾಂಪ್ರದಾಯಿಕ ಹಿನ್ನೆಲೆಯಿರುವ ವೀರಗಾಸೆ, ಡೊಳ್ಳುನೃತ್ಯ, ಭರತನಾಟ್ಯ, ಪಂಜಾಬಿ ಗಾರ್ಬ, ದಾಂಡೀಯ, ಜಾರ್ಖಂಡ್ ನೃತ್ಯ, ಎಲ್ಲರ ಕಣ್ಮನ ಸೆಳೆಯಿತು.

DSCN0071

DSCN0230

DSCN0238

DSCN0251

ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿ, 2014-15ನೇ ಸಾಲಿನ ವರದಿಯನ್ನು ಮಂಡಿಸಿದರು. ಕ್ರೀಡಾಕ್ಷೇತ್ರದ ವಿಜೇತರ ಹಾಗೂ ಸಾಂಸ್ಕøತಿಕ ವಿಭಾಗದ ವಿಜೇತರ ಪಟ್ಟಿಯನ್ನು ಕ್ರಮವಾಗಿ ಕಾಲೇಜಿನ ದೈಹಿಕ ನಿರ್ದೇಶಕ ಕರುಣಾಕರ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶೈಲಜಾ ವಾಚಿಸಿದರು. ವಿದ್ಯಾರ್ಥಿ ಮೋಹಿನಿ ವಂದಿಸಿ, ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *