ಸುದ್ದಿ9 ಬಂಟ್ವಾಳ : ವ್ಯಕ್ತಿ, ಜಾತಿ, ಮತಕ್ಕಿಂತಲೂ ಮುಖ್ಯವಾಗಿ ಅಧರ್ಮದ ವಿರುದ್ದದ ಹೋರಾಟಕ್ಕೆ ಜನಸಂಘಟನೆ ಅತೀಅಗತ್ಯವಾಗಿ ಆಗಬೇಕಿದೆ, ಅಮಾನುಷಳಾಗಿ ಹತ್ಯೆಗೀಡಾದ ಸೌಮ್ಯಳ ಸಾವಿಗೆ ಕಾರಣನಾದ ಆರೋಪಿಯ ಕಠೋರತನಕ್ಕೆ ಶಿಕ್ಷೆಯಾಗಲು ಬಾಳ್ತಿಲದ ಗ್ರಾಮಸ್ಥರ ಹೋರಾಟ ಕಾರಣವಾಗಿದ್ದು, ಅನ್ಯಾಯವನ್ನು ಪ್ರತಿಭಟಿಸುವ ದಿಟ್ಟತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಅಭಿಪ್ರಾಯ ಪಟ್ಟಿದ್ದಾರೆ.
ಕುದ್ರೆಬೆಟ್ಟುವಿನ ಸಾರ್ವಜನಿಕ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಹೋಟೆಲ್ ಪ್ರಶಾಂತ್ ಮುಂಭಾಗದಲ್ಲಿ ಭಾನುವಾರ ನಡೆದ ಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸುಂದರ ಸಾಲಿಯಾನ್ ಹಾಗೂ ಗ್ರಾಮನಿಷ್ಠರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಸನ್ಮಾನ ನೆರವೇರಿಸಿ ಮಾತನಾಡಿದರು. ಊರಿನಲ್ಲಿ ನಡೆಯುವ ಅನ್ಯಾಯಗಳ ಬಗ್ಗೆ ಗ್ರಾಮಸ್ಥರು ಒಗ್ಗಟ್ಟಾದರೆ, ಸಮಸ್ಯೆಗ ಪರಿಹಾಋ ಕಂಡುಕೊಳ್ಳಲು ಸಾಧ್ಗ ಎಂದ ಅವರು, ಸೌಮ್ಯ ಪ್ರಕರಣದಲ್ಲಿ ಒಗ್ಗಟ್ಟಿನ ಹೋರಾಟದಿಂದ ಆರೋಪಿಗೆ ಶಿಕ್ಷೆಯಾಗಿದೆ. ಈ ಹೋರಾಟ ಇತರೆಡೆಗಳಿಗೂ ಪಾಠವಾಗಲಿ ಎಂದವರು ಶುಭ ಹಾರೈಸಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಬಾಳ್ತಿಲ ನಾಗರಿಕ ಹಿತರಕ್ಷಣ ಸಮಿತಿ ಅಧ್ಯಕ್ಷ ಮೋಹನ್ ಪಿ.ಎಸ್, ಬಾಳ್ತಿಲ ಗ್ರಾ.ಪಂ. ಉಪಾಧ್ಯಕ್ಷ ಬಿ.ಕೆ. ಅಣ್ಣು ಪೂಜಾರಿಜನಶಕ್ತಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಜಿನ್ನಪ್ಪ, ಶಿಕ್ಷಣ ಸಂಯೋಜಕ ನಾರಾಯಣ ಗೌಡ, ಪ್ರಮುಖರಾದ ಗಂಗಾಧರ ಗೌಡ ಉಪಸ್ಥಿತರಿದ್ದರು. ಯತೀನ್ ಕುಮಾರ್ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ಪ್ರಸ್ತಾವಿಸಿದರು. ಜಯಗಣೇಶ್ ನಿರೂಪಿಸಿದರು.
ಬಾಳ್ತಿಸೌಮ್ಯ ಕೊಲೆ ಪ್ರಕರಣ ಪ್ರಮುಖ ಸಾಕ್ಷಿಗಳಾದ ಮೋಹನ್ ಪಿ.ಎಸ್, ಮೋನಪ್ಪ ಪೂಜಾರಿ, ದೇವಕಿಯಮ್ಮ, ವಿದ್ಯಾ, ಅರುಣ್ ಪೂಜಾರಿ ಜೈನರ ಪಾಲು, ಸದಾಶಿವ ನಾಯಕ್, ಕೃಷ್ಣಪ್ಪ ಪೂಜಾರಿ ಬಾಳ್ತಿಲ, ಗುರುಪ್ರಸಾದ್ ಭಟ್, ದಿನೇಶ್ ನಾಯಕ್ ಕೋರ್ಯ, ನಾಗರಾಜ ಆಚಾರ್ಯ, ಆನಂದ ಪೂಜಾರಿ, ವಲೇರಿಯನ್ ಡಯಾಸ್ ಅವರನ್ನು ಗೌರವಿಸಲಾಯಿತು.

By Suddi9

Leave a Reply

Your email address will not be published. Required fields are marked *