ಬಜ್ಪೆ: ನೀರಿನ ಟ್ಯಾಂಕರ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ನೀರಿನ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಬಜ್ಪೆ ಸಮೀಪದ ಒಡ್ಡಿದಕಳ ಎಂಬಲ್ಲಿ ಫೆ.4ರಂದು ನಡೆದಿದೆ. ಗಾಯಗೊಂಡ ಟ್ಯಾಂಕರ್ ಚಾಲಕನನ್ನು ಬಜ್ಪೆಯ ಖಲಂದರ್ ಇಷರ್ಾದ್ ಎಂದು ಗುರುತಿಸಲಾಗಿದೆ.
ಇಷರ್ಾದ್ ಖಲಂದರ್ ಅವರು ತನ್ನ ನೀರಿನ ಟ್ಯಾಂಕರನ್ನು ಒಡ್ಡಿದಕಳ ಎಂಬಲ್ಲಿನ ರಸ್ತೆಯಲ್ಲಿ ಬಜ್ಪೆ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಕಳವಾರು ಕಡೆಯಿಂದ ಒಡ್ಡಿದಕಳಕ್ಕೆ ಬರುತ್ತಿದ್ದ ಟಿಪ್ಪರ್ ಚಾಲಕ ಎದುರಿನಲ್ಲಿ ಹೋಗುತ್ತಿದ್ದ ಟ್ಯಾಂಕರನ್ನು ಓವರ್ಟೇಕ್ ಮಾಡುವ ಭರದಲ್ಲಿ ಟ್ಯಾಂಕರ್ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಈ ವೇಳೆ ಖಲಂದರ್ ಅವರ ಎಡಗಾಲಿನ ಮೊಣಗಂಟು, ಎಡಗಾಲಿನ ಪಾದ ಜಖಂ ಆಗಿದ್ದಲ್ಲದೆ ಟ್ಯಾಂಕರ್ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಲ್ಲದೆ ಟಿಪ್ಪರ್ ಲಾರಿಗೂ ಸಣ್ಣಪುಟ್ಟ ಹಾನಿಯಾಗಿದೆ. ಅಪಘಾತಕ್ಕೆ ಟಿಪ್ಪರ್ ಚಾಲಕನ ಅವಾಂತರವೇ ಕಾರಣ ಎಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
