ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರದ ಬಾಲ ಸಂರಕ್ಷಣಾ ಕೇಂದ್ರದಿಂದ ರವಿ(14)ಎಂಬಾತ ಫೆ.2ರಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಬಾಲಸಂರಕ್ಷಣಾ ಕೇಂದ್ರದ ಚಂದ್ರಶೇಖರ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ರವಿ ಫೆ.2ರ ರಾತ್ರಿ 8ರ ಸುಮಾರಿಗೆ ಊಟ ಮಾಡಿದ ನಂತರ ಕೈತೊಳೆಯಲು ಹೋಗಿದ್ದು, ಆನಂತರದಿಂದ ನಾಪತ್ತೆಯಾಗಿದ್ದಾನೆ. ಈತ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತೆರಳಿರಬಹುದೆಂಬ ಸಂಶಯದಲ್ಲಿ ಆ ಭಾಗದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. 5 ಅಡಿ 1 ಇಂಚು ಎತ್ತರ. ಎಣ್ಣೆಕಪ್ಪು ಬಣ್ಣ, ದೃಢಕಾಯ ಶರೀರ, ಕೆಂಪು ಬಣ್ಣದ ಬನಿಯನ್ ಧರಿಸಿದ, ಕನ್ನಡ ಮಾತಾಡುವ ಬಾಲಕ ಪತ್ತೆಯಾದರೆ ಬಜ್ಪೆ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.
