ಹೃಷಿಕೇಶ: ಹಿಂದೂ ರಾಷ್ಟ್ರೀಯವಾಗಿಗಳ ಬೇಡಿಕೆಯತ್ತ ಪ್ರಧಾನಿ ನರೇಂದ್ರ ಮೋದಿಯವರು ಗಮನ ಹರಿಸಬೇಕು. ಹಿಂದೂಗಳ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಹೋದರೆ ಮೋದಿ ಸರಕಾರವನ್ನು ಬೀಳಿಸುತ್ತೇನೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಮೋದಿಯವರಿಗೆ ಖಡಕ್ ಸಂದೇಶ ನೀಡಿದ್ದಾರೆ.
ಹೃಷಿಕೇಶದಲ್ಲಿ ಪತ್ರಕರ್ತರೊಂದಿಗೆ ಮಾತಾಡಿದ ಅವರು ಮೋದಿಯವರು ದೇಶದ ಆರ್ಥಿಕ ಅಭಿವೃದ್ಧಿಗೆ ಮಾತ್ರವಲ್ಲ, ಹಿಂದೂ ಅಜೆಂಡಾದ ಬಗ್ಗೆಯೂ ಗಮನ ಹರಿಸಬೇಕು. ಹಿಂದೂಗಳ ಬಗ್ಗೆ ಗಮನ ಹರಿಸದೇ ಇದ್ದರೆ ಮೋದಿ ಸರಕಾರವನ್ನು ಬೀಳಿಸುವ ತಾಖತ್ ನನಗಿದೆ ಎಂದು ಕಡ್ಡಿ ಮುರಿದಂತೆ ಹೇಳಿರುವುದು ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ.

