
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಪಂಚಮ ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ 11ರಂದು ಶ್ರೀ ಪೊಳಲಿ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಚಂಡಿಕಾ ಹೋಮವು ನೆರವೇರಿತು. ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾ ಚೈತನ್ಯನಂದ ಅವರು ಚಂಡಿಕಾ ಹೋಮವನ್ನು ನೇತೃತ್ವವಹಿಸಿದರು. ಪೊಳಲಿ ದೇವಸ್ಥಾನದ ಅರ್ಚಕರಾದ ಅನಂತ್ ಭಟ್, ನಾರಾಯಣ್ ಭಟ್, ಪರ್ದಖಂಡ ಪರಮೇಶ್ವರ ಭಟ್, ವಾಸುದೇವ ಮಯ್ಯ, ರಾಮ್ ಭಟ್, ಮಾಧವ ಭಟ್ ಮತ್ತಿತರರು ಪೂಜೆಯನ್ನು ನೆರವೇರಿಸಿದರು.



