ಮೂಡುಬಿದರೆ: ವಿದ್ಯುತ್ ಶಾಟ್ ಸರ್ಕ್ಯು ಟ್ನಿಂದಾಗಿ ಶಿರ್ತಾಡಿಯಲ್ಲಿ ರಬ್ಬರ್ ತೋಟಕ್ಕೆ ಬೆಂಕಿ ತಗುಲಿ, ಸುಮಾರು 2 ಲಕ್ಷ ರೂ ಮೌಲ್ಯದ ರಬ್ಬರ್ ಬೆಳೆ ನಾಶವಾಗಿದೆ.
ಶಿರ್ತಾಡಿ ಗ್ರಾ,ಪಂ ವ್ಯಾಪ್ತಿಯ ಕಜೆ ಗುವೆಲಾಡಿ ಎಂಬ ಪ್ರದೇಶದಲ್ಲಿ ಕೇರಳ ಮೂಲದ ರಾಬರ್ಟ್ ಮತ್ತು ಚಿತ್ತರಂಜನ್ ಎಂಬವರಿಗೆ ಸೇರಿದ ಸುಮಾರು 9 ಎಕರೆ ಪ್ರದೇಶದಲ್ಲಿರುವ ರಬ್ಬರ್ ತೋಟಕ್ಕೆ ಬೆಂಕಿ ತಗುಲಿ ಸುತ್ತಲಿನ ಪ್ರದೇಶಕ್ಕೆ ಆವರಿಸಿದ್ದು ನಾಲ್ಕೂವರೆ ಎಕರೆ ಪ್ರದೇಶದಲ್ಲಿದ್ದ ರಬ್ಬರ್ ಕೃಷಿಗೆ ಬೆಂಕಿ ಆವರಿಸಿ ಸುಟ್ಟು ಹೋಗಿದೆ.
ತೋಟದ ಮಧ್ಯೆ ನಾಗಜರ್ುನ ಕಂಪನಿಗೆ ಸೇರಿದ ಟವರ್ಗಳಿದ್ದು ಇದರ ತಂತಿಯಿಂದ ಉಂಟಾದ ಶಾರ್ಟ್ ಸರ್ಕ್ಯು ಟ್ನಿಂದಾಗಿ ಬೆಂಕಿ ಬಿದ್ದು ಘಟನೆ ನಡೆದಿದೆ. ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳಿಯ ಯುವಕರು ಬೆಂಕಿ ನಂದಿಸಲು ಪ್ರಯತ್ನಿಸಿ, ಮೂಡುಬಿದರೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿದರು.

ತೋಟದ ಮಾಲಕರು ಕೇರಳಕ್ಕೆ ತೆರಳಿದ್ದು ಶಿರ್ತಾಡಿ ಗ್ರಾ.ಪಂ ಸದಸ್ಯ ಪ್ರವೀಣ್ ಕುಮಾರ್ ಅಗ್ನಿಶಾಮಕಕ್ಕೆ ಕರೆ ಮಾಡಿ ತಿಳಿಸಿದ್ದರು. ಅಗ್ನಿಶಾಮಕವು ಕರಿಮೇಲು ಎಂಬಲ್ಲಿ ಬೆಂಕಿ ಬಿದ್ದಿದ್ದರಿಂದ ಅಲ್ಲಿ ಬೆಂಕಿ ನಂದಿಸಿ ಬರುವ ವೇಳೆ ಸ್ವಲ್ಪ ತಡವಾಗಿತ್ತು. ಅಲ್ಲದೆ ಗುವೆಲಾಡಿಯಲ್ಲಿ ತೋಟಕ್ಕೆ ಹೋಗಲು ಸರಿಯಾದ ರಸ್ತೆಯ ವ್ಯವಸ್ಥೆ ಸರಿಯಾಗಿ ಇಲ್ಲದಿದ್ದುದರಿಂದ ಅಗ್ನಿಶಾಮಕ ವಾಹನವು ಹೋಗಲು ಕಷ್ಟವಾಗಿತ್ತು ಆದರೂ ಕಷ್ಟಪಟ್ಟು ಅಗ್ನಿಶಾಮಕ ಅಧಿಕಾರಿಗಳು ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಅಂತಪ್ಪ ಅವರ ನೇತೃತ್ವದಲ್ಲಿ ಸಿಬಂದಿಗಳಾದ ಉದಯಕುಮಾರ್ ಹೆಗ್ಡೆ, ಸತ್ಯಪ್ರಕಾಶ್, ಕುಲಕರ್ಣಿ , ಸಂಜೀವ, ಹೋಂ ಗಾರ್ಡ್ ಲಾರೆನ್ಸ್ ಬೆಂಕಿ ನಂದಿಸಿದರು.

