ಮೂಡುಬಿದರೆ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಮೂಡುಬಿದರೆಯ ಪದ್ಮಾವತಿ ಕಲಾಮಂದಿರದಲ್ಲಿ ಭಾನುವಾರ ಗುರುಪುರ-ಮೂಡುಬಿದರೆ-ಮೂಲ್ಕಿ ವಲಯದ ಜಿಎಸ್ಬಿ ಸಾಮಾಜಿಕ ಜಾಗೃತಿ ಸಮಾವೇಶ ನಡೆಯಿತು.
ಬೆಂಗಳೂರು ಗೌಡ ಸಾರಸ್ವತ ಸೇವಕ ಸಮಾಜದ ಅಧ್ಯಕ್ಷ ಜಿ.ಜಿ.ಶೆಣೈ ಸಮ್ಮೇಳನ ಉದ್ಘಾಟಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಮಾಜಿ ಸೇನಾ ಅಧಿಕಾರಿ ವೈಸ್ ಎಡ್ಮಿರಲ್.ಬಿ.ರಾಧಾಕೃಷ್ಣ ರಾವ್ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಡಿಜಿಎಂ ಕೆ.ಗಣೇಶ್ ಮಲ್ಯ ದಿಕ್ಸೂಚಿ ಭಾಷಣ ಮಾಡಿದರು. ಸಂಸ್ಕಾರ, ಸಂಪ್ರದಾಯದೊಂದಿಗೆ ಜಾಗೃತಿ ಮಾಡಿದರೆ ಜಿಎಸ್ಬಿ ಸಮಾಜ ಏಳಿಗೆಯಾಗುತ್ತದೆ ಎಂದರು.


ಜಿವಿಎಸ್ ಫಾರ್ಮ್ನ ಶಿಬರೂರು ನರಸಿಂಹ ಕಾಮತ್, ಬಂಟ್ವಾಳ ಶ್ರೀತಿರುಮಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಲಕ್ಷ್ಮಣ್ ಕಾಮತ್, ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ ಕೋಟ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಸಮಾವೇಶ ಸಮಿತಿ ಉಪಾಧ್ಯಕ್ಷರಾದ ವೆ.ಮೂ. ಹರೀಶ್ ಭಟ್, ಕೆ.ನಾರಾಯಣ ಶೆಣೈ ಮೂಲ್ಕಿ, ವಿಶ್ವನಾಥ ಪ್ರಭು ಕೆಸರಗದ್ದೆ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿಶ್ವನಾಥ ಪ್ರಭು, ವ್ಯವಸ್ಥಾಪನ ಪ್ರಮುಖ, ನವಮಿ ಗ್ರೂಫ್ಸ್ನ ನಂದಕುಮಾರ್ ಕುಡ್ವ, ಅತುಲ್ ಕುಡ್ವ, ಸಂಯೋಜಕ ಎಂ.ಅಶೋಕ್ ಮಲ್ಯ, ಪ್ರಧಾನ ಕಾರ್ಯದರ್ಶಿ ಆರ್.ರವೀಂದ್ರ ಪೈ, ಜತೆ ಕಾರ್ಯದರ್ಶಿ ವೆಂಕಟೇಶ್ ಕಾಮತ್, ಕೋಶಾಧ್ಯಕ್ಷ ಬಿ.ಶ್ರೀಕಾಂತ್ ಕಾಮತ್, ಸಹ ಕೋಶಾಧ್ಯಕ್ಷ ಬಿ.ರಾಘವೇಂದ್ರ ಕಾಮತ್, ಸಂಘಟನಾ ಕಾರ್ಯದರ್ಶಿ ಪ್ರಸನ್ನ ವಿ.ಶೆಣೈ, ಟಿ.ರಘುವೀರ್ ಶೆಣೈ, ಮೇಲ್ವಿಚಾರಣಾ ಸಮಿತಿಯ ಎಂ.ಜ್ಞಾನೇಶ್ವರ್ ಕಾಳಿಂಗ ಪೈ, ಮನೋಜ್.ಕೆ.ಶೆಣೈ, ರಾಜೇಶ್ ಮಲ್ಯ, ರಘುನಾಥ ಭಟ್, ಭಾಸ್ಕರ್ ಪೈ ವೇಣೂರು ಮೊದಲಾದವರು ಉಪಸ್ಥಿತರಿದ್ದರು.
ಸಮಾವೇಶದ ಕಾರ್ಯಧ್ಯಕ್ಷ ಜಿ.ಉಮೇಶ್ ಪೈ ಸ್ವಾಗತಿಸಿದರು. ವೇದಿಕೆಯ ಸಂಚಾಲಕ ವಿವೇಕಾನಂದ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಕುಂದ ಕಾಮತ್ ಮಿಜಾರು ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಪ್ರಭು, ಶಾಂತರಾಮ ಕುಡ್ವ ಅತಿಥಿಗಳನ್ನು ಪರಿಚಯಿಸಿದರು.
ಸಮಾವೇಶದಲ್ಲಿ ನಡೆದ ಮಹಿಳಾಗೋಷ್ಠಿಯಲ್ಲಿ ಪೆರ್ಡೂರಿನ ಸಾಮಾಜಿಕ ಕಾರ್ಯಕರ್ತೆ ಪಿ.ವಾಣಿ ಮಲ್ಯ `ಸಾಮಾಜಿಕ ಪ್ರಜ್ಞಾ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಮೂಡುಬಿದಿರೆಯ ಯು.ಶಕುಂತಲಾ.ವಿ.ಕಿಣಿ ಅಧ್ಯಕ್ಷತೆವಹಿಸಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿನ ಜಿಎಸ್ಬಿ ಪರಂಪರೆಯನ್ನು ಬಿಂಬಿಸುವ ನೃತ್ಯ ರೂಪಕ ಹಾಗೂ ಶಾಸ್ತ್ರೀಯ ನೃತ್ಯ ನಡೆದವು. ಉಡುಪಿ ಡಾ.ಎ.ವಿ.ಬಾಳಿಗಾ ಸಂಸ್ಥೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಅವರು ಕೌಟುಂಬಿಕ ಸಾಮರಸ್ಯ ಬಗ್ಗೆ ಉಪನ್ಯಾಸ ನೀಡಿದರು. ಮೂಡುಬಿದಿರೆ ಮಹಾಲಸ ನಾರಾಯಣಿ ದೇವಸ್ಥಾನದ ಪ್ರೊ.ಎಂ.ರಮೇಶ್ ಭಟ್ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸ್ವರಾಜ್ಯಮೈದಾನದಿಂದ ಪದ್ಮಾವತಿ ಕಲ್ಯಾಣಮಂಟಪದವರೆಗೆ ವೈಭವದ ಮೆರವಣಿಗೆ ನಡೆಯಿತು.


