ಸುದ್ದಿ9 ಕಿನ್ನಿಕಂಬಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಮಂಗಳೂರು ಇದರ ಮಾರ್ಗದರ್ಶನದಲ್ಲಿ ಕಂದಾವರ ಒಕ್ಕೂಟ, ಕೈಕಂಬ ವಲಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಕೈಕಂಬ ಇದರ ಸಂಯುಕ್ತ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪರಮ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಅಮ್ಮನವರ ಶುಭಾಶೀರ್ವಾದಗಳೊಂದಿಗೆ 10ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಫೆ.1 ಭಾನುವಾರದಂದು ನಡೆಯಿತು.

swasahaya  d

 

swasahaya  d 1ಬೆಳಿಗ್ಗೆ 8ರಿಂದ 11ರವರೆಗೆ ಸಭಾ ಕಾರ್ಯಕ್ರಮ ನಡೆಯಿತು. ಅರ್ಚಕರಾದ ರವಿ ಭಟ್ ಕೌಡೂರು ಇವರು ಆಶೀರ್ವಚನ ನೀಡಿದರು. ಕಂದಾವರ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ವಿಜಯ ಜಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು, ಮಂಗಳೂರು ಶ್ರೀ ಕ್ಷೇ.ಧ.ಗ್ರಾ.ಯೋ.(ರಿ), ಮಂಗಳೂರು ಇದರ ನಿರ್ದೇಶಕರಾದ ಸಂಪತ್ ಕುಮಾರ್, ಪೊಂಪೈ ಆಂಗ್ಲಮಾದ್ಯಮ ಶಾಲೆ ಕೈಕಂಬ ಇಲ್ಲಿನ ಪ್ರಾಂಶುಪಾಲಾರಾದ ಮಹೇಶ್ ಶೆಟ್ಟಿ, ಉದ್ಯಮಿ  ಕಾವೂರು ಚಂದ್ರಹಾಸ ಟಿ.ಅಮೀನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.   ಶಿವರಾಮ್ ಕೆ.ಸ್ವಾಗತಿಸಿ  ,  ಕೇಶವ ಎ.  ಕಾರ್ಯಕ್ರಮ  ನಿರೂಪಿಸಿದರು , ಶಾಲಿನಿ ಎಸ್ ವರದಿ ವಾಚಿಸಿದರು.

 

 

By suddi9

Leave a Reply

Your email address will not be published. Required fields are marked *