ವಿಟ್ಲ: ಅಪ್ರಾಪ್ತ ಬಾಲಕಿಯನ್ನು ಪುಸ ಲಾಯಿಸಿ ಮನೆಗೆ ಕರೆಸಿ ಅತ್ಯಾಚಾರ ಎಸೆಗಿದ ಆರೋಪಿಗೆ ಮಂಗ ಳೂರು ಸೆಷನ್ಸ್ ನ್ಯಾಯಾಲಯ ನಿನ್ನೆ ನ್ಯಾಯಾಂಗ ಬಂಧನ ವಿಧಿಸಿದೆ.

ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪದ ಕಾರಾಜೆ ನಿವಾಸಿ ರಝಬ್(50) ಎಂಬಾತ ಜ.23ರಂದು ಮಧ್ಯಾಹ್ನ 10 ವರ್ಷದ ಬಾಲಕಿಯನ್ನು ಮನೆಗೆ ತನ್ನ ಮನೆಗೆ ಕರೆಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದ. ಆರೋಪಿಯನ್ನು ವಿಟ್ಲ ಠಾಣಾಧಿಕಾರಿ ರಾಘವೇಂದ್ರ ಟಿ.ಆರ್. ಹಾಗೂ ಸಿಬ್ಬಂದಿ ಆತನನ್ನು ಮನೆಯಿಂದಲೇ ಬಂಧಿಸಿದ್ದರು. ಶುಕ್ರವಾರ ಬೆಳಿಗ್ಗೆ ಆರೋಪಿಯನ್ನು ವಿಟ್ಲ ಪೊಲೀಸರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
