ಕೈಕಂಬ: ದ.ಕ. ಜಿಲ್ಲಾ ಪ್ರಾದೇಶಿಕ ಪ್ರಾಧಿಕಾರವು ಜನವರಿ 12ಕ್ಕೆ ಅನ್ವಯವಾಗುವಂತೆ ಪರಿಷ್ಕೃತ ಆಟೋರಿಕ್ಷಾ ದರವನ್ನು ನಿಗದಿ ಮಾಡಿದೆ. ಆದರೆ ಆಟೋರಿಕ್ಷಾ ಪರಿಷ್ಕರಣೆ ದರವನ್ನು ಕೂಡಲೇ ಹಿಂಪಡೆದು ಹಿಂದಿನ ದರವನ್ನೇ ಮುಂದುವರಿಸುವಂತೆ ಆಗ್ರಹಿಸಿ ರಿಕ್ಷಾ ಚಾಲಕ-ಮಾಲಕರು ಜ.30ರಂದು ಕೈಕಂಬ ಬಜ್ಪೆಯಾದ್ಯಂತ ರೋಡಿಗೆ ರಿಕ್ಷಾ ಇಳಿಸದೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಜ.28ರಂದು ಮಂಗಳೂರು ನಗರದಲ್ಲಿ ರಿಕ್ಷಾ ಚಾಲಕಮಾಲಕರು ರಿಕ್ಷಾ ರಸ್ತೆಗಿಳಿಸದೆ ಬಂದ್ ವ್ಯಕ್ತಪಡಿಸಿದ್ದರು. ಆದರೆ ಇದರ ಬಿಸಿ ಗ್ರಾಮಾಂತರ ಪ್ರದೇಶಗಳಿಗೂ ತಟ್ಟಿದ್ದು ಕೈಕಂಬದ ಸುತ್ತಮುತ್ತಲಿನ ಪ್ರದೇಶಗಳಾದ ಕೈಕಂಬ, ಗಂಜಿಮಠ, ಗುರುಪುರ, ಅಡ್ಡೂರು ಪೊಳಲಿ, ಪುಂಚಮೆ ಬಡಕಬೈಲ್, ಕಲ್ಲಗುಡ್ಡೆ ಪೆಮರ್ುದೆ ಮುಂತಾದ ಕಡೆ ಯಾವುದೇ ಆಟೋರಿಕ್ಷಾಗಳು ರಸ್ತೆಗಿಳಿಯಲಿಲ್ಲ. ಇದರಿಂದ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಇಲ್ಲದ ಕಡೆಗಳ ಜನರು ಪರದಾಟ ನಡೆಸಿದರು. ನಿನ್ನೆ ನಡೆದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಿಕ್ಷಾ ರಸ್ತೆಯಲ್ಲಿಲ್ಲದೆ ವಾಹನದಟ್ಟಣೆ ಕಡಿಮೆಯಾಗಿತ್ತು.
