ಮುಜಫ್ಫರ್‍ಪುರ: ಅನ್ಯ ಧರ್ಮೀಯರಿಬ್ಬರ ಪ್ರೇಮಪ್ರಸಂಗದಿಂದ ಹೊತ್ತಿಕೊಂಡ ಕಿಡಿ ಇಡೀ ಬಿಹಾರವನ್ನೇ ಸುಟ್ಟು ಕರಕಲಾಗುವಂತೆ ಮಾಡಿದೆ. ಪ್ರೇಮಜ್ವಾಲೆಯ ಕಿಡಿಯಿಂದ ಮೂವರು ಬಲಿಯಾಗುವ ಮೂಲಕ ಬಿಹಾರದ ಮಾನ ಮತ್ತೊಮ್ಮೆ ಹರಾಜಾಗಿದೆ.

pre1

premajwale
ಬಿಹಾರದ ಮುಜಫ್ಫರ್‍ಪುರ ಜಿಲ್ಲೆಯ ಸರಯ್ಯಾ ಗ್ರಾಮದಲ್ಲಿ ಅನ್ಯ ಕೋಮುಗಳ ಪ್ರೀತಿಯ ಕಿಚ್ಚಿಗೆ ಮೂವರು ಸಜೀವವಾಗಿ ದಹನವಾಗಿದ್ದು, ಮತ್ತಿಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಹತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಯುವಕನ ಅಪಹರಣವಾಗಿತ್ತು. ಆ ಯುವಕನ ಶವ ನಿನ್ನೆ ಯುವತಿಯ ತಂದೆಯ ಜಮೀನಿನಲ್ಲಿ ಪತ್ತೆಯಾಗಿದ್ದರಿಂದ ಹುಡುಗಿಯ ಕಡೆಯವರೆ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಬಹುಸಂಖ್ಯಾತ ಕೋಮಿನ ಒಂದು ಗುಂಪು, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಗ್ರಾಮಕ್ಕೆ ನುಗ್ಗಿ 40ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿಗೆ ಮೂವರು ಸಜೀವ ದಹನವಾಗಿತ್ತು. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನ್ಯ ಕೋಮಿನ ಯುವಕನನ್ನು ತಮ್ಮ ಮಗಳು ಪ್ರೀತಿಸುತ್ತಿರುವುದಕ್ಕೆ ಹುಡುಗಿಯ ತಂದೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಯುವಕ ಅಪಹರಣವಾಗಿ ಆತನ ಶವ ಹುಡುಗಿಯ ತಂದೆಯ ಜಮೀನಿನಲ್ಲಿ ಪತ್ತೆಯಾಗಿದ್ದರಿಂದ ಹಿಂಸಾಚಾರ ಭುಗಿಲೆದಿದ್ದೆ. ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆಯನ್ನು ವಶಕ್ಕೆ ಪಡೆದಿರುವ ಪೆÇಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಕಿಯ ಕಾಡ್ಗಿಚ್ಚಿಗೆ ಬಲಿಯಾದವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಬಿಹಾರ ಸರ್ಕಾರ ಘೋಷಿಸಿದೆ. ಸದ್ಯ ಸರಯ್ಯಾ ಗ್ರಾಮದಲ್ಲಿ ಪರಿಸ್ಥಿತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೆÇಲೀಸರನ್ನು ನಿಯೋಜಿಸಲಾಗಿದೆ.

By suddi9

Leave a Reply

Your email address will not be published. Required fields are marked *